ಪಾಕಿಸ್ತಾನಕ್ಕೆ ಭೇಟಿ ನೀಡಿದ ಜಾಕ್ ಮಾ..!

ಇಸ್ಲಾಮಾಬಾದ್‌ :ಚೀನಾದ ಬಿಲಿಯನೇರ್ ಮತ್ತು ಅಲಿಬಾಬಾ ಗ್ರೂಪ್‌ನ ಸಹ-ಸಂಸ್ಥಾಪಕ ಜಾಕ್ ಮಾ ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಈ ಕುರಿತು ಪಾಕಿಸ್ತಾನ ಮೂಲದ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಜಾಕ್ ಮಾ ಅವರು ಜೂನ್ 29 ರಂದು ಲಾಹೋರ್‌ಗೆ ಆಗಮಿಸಿ ಸುಮಾರು 23 ಗಂಟೆಗಳ ಕಾಲ ಅಲ್ಲಿದ್ದರು ಎಂದು ಬೋರ್ಡ್ ಆಫ್ ಇನ್ವೆಸ್ಟ್‌ಮೆಂಟ್ ನ ಮಾಜಿ ಅಧ್ಯಕ್ಷ ಮುಹಮ್ಮದ್ ಅಜ್ಫರ್ ಅಹ್ಸನ್ ಹೇಳಿರುವುದಾಗಿ ಪತ್ರಿಕಾ ವರದಿ ತಿಳಿಸಿದೆ. ಜಾಕ್ ಮಾ ಭೇಟಿ ನೀಡಿ ಖಾಸಗಿ ಸ್ಥಳದಲ್ಲಿ ನೆಲೆಸಿದ್ದರು ಎನ್ನಲಾಗುತ್ತಿದೆ.

ಬಿಜೆಪಿ ಕಚೇರಿಯಲ್ಲೇ ಮುಖಂಡ ಸಿದ್ದೇಶ್ ಯಾದವ್ ಹೃದಯಾಘಾತದಿಂದ ಸಾವು

ಮಾ ಅವರ ಅನಿರೀಕ್ಷಿತ ಭೇಟಿಯ ಉದ್ದೇಶವು ಗೌಪ್ಯವಾಗಿದ್ದರೂ, ಮುಂಬರುವ ದಿನಗಳಲ್ಲಿ ಪಾಕಿಸ್ತಾನಕ್ಕೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ ಎಂದು ಅಹ್ಸಾನ್ ಭರವಸೆ ವ್ಯಕ್ತಪಡಿಸಿದ್ದಾರೆ. ಐದು ಚೀನೀಯರು , ಒಬ್ಬ ಡ್ಯಾನಿಶ್ ವ್ಯಕ್ತಿ ಮತ್ತು ಒಬ್ಬ ಯುಎಸ್ ಪ್ರಜೆಯನ್ನು ಒಳಗೊಂಡ ಏಳು ಉದ್ಯಮಿಗಳ ನಿಯೋಗದೊಂದಿಗೆ ಮಾ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ.

ಜಾಕ್ ಮಾ ಮತ್ತು ಅವರ ತಂಡ ಭೇಟಿ ನೀಡಿದ ನಂತರ ಪಾಕಿಸ್ತಾನದಲ್ಲಿ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವುದರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಊಹಾಪೋಹಗಳು ಹರಿದಾಡುತ್ತಿವೆ. ಅವರು ವ್ಯಾಪಾರ ಕೇಂದ್ರಗಳಿಗೆ ಭೇಟಿನ ನೀಡಿ, ವಿವಿಧ ವಾಣಿಜ್ಯ ಮಂಡಳಿಗಳ ಪ್ರಮುಖ ಉದ್ಯಮಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದಾಗ್ಯೂ, ಯಾವುದೇ ನಿರ್ದಿಷ್ಟ ವ್ಯಾಪಾರ ವ್ಯವಹಾರಗಳು ಅಥವಾ ಸಭೆಗಳ ಬಗ್ಗೆ ಯಾವುದೇ ದೃಢೀಕೃತ ಮಾಹಿತಿ ಸಿಕ್ಕಿಲ್ಲ. ಈ ಮಧ್ಯೆ ಮಾ ಅವರ ಭೇಟಿ ವೈಯಕ್ತಿಕ ಉದ್ದೇಶಗಳಿಗಾಗಿತ್ತು ಎಂದು ಅಹ್ಸಾನ್ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

Comments (0)
Add Comment