ಪಾಕಿಸ್ತಾನದಲ್ಲಿ ಹಳಿ ತಪ್ಪಿದ ರೈಲು: 20 ಮಂದಿ ಸಾವು-100ಕ್ಕೂ ಅಧಿಕ ಮಂದಿಗೆ ಗಾಯ..!

ಕರಾಚಿ: ರಾವಲ್ಪಿಂಡಿಗೆ ಹೊರಟಿದ್ದ ರೈಲಿನ 10 ಬೋಗಿಗಳು ಹಳಿತಪ್ಪಿದ್ದು, 20 ಮಂದಿ ಮೃತಪಟ್ಟಿದ್ದಾರೆ.ಕರಾಚಿಯಿಂದ ರಾವಲ್ಪಿಂಡಿಗೆ ತೆರಳುತ್ತಿದ್ದ ಹಜಾರ ಎಕ್ಸ್‌ಪ್ರೆಸ್ ರೈಲು ನವಾಬ್ ಶಾ ಪ್ರದೇಶದ ಸರ್ಹಾರಿ ರೈಲು ನಿಲ್ದಾಣದ ಬಳಿ ಹಳಿ ತಪ್ಪಿದೆ.

ಅಪಘಾತದಲ್ಲಿ 20 ಜನರು ಮೃತಪಟ್ಟಿದ್ದು, ಮೃತದೇಹಗಳನ್ನು ಹೊತೆಗೆಯಲಾಗಿದೆ ಮತ್ತು ಗಾಯಗೊಂಡಿರುವ 50 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪಾಕಿಸ್ತಾನ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕರಾಚಿಯಿಂದ ರಾವಲ್ಪಿಂಡಿಗೆ ಸಂಚರಿಸುತ್ತಿದ್ದ ರೈಲು ಸಿಂಧ್​ ಪ್ರಾಂತ್ಯದ ನವಾಬ್​ಶಾ ಬಳಿ ಹಳಿ ತಪ್ಪಿ ದುರಂತ ಸಂಭವಿಸಿದೆ ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದ್ದಾರೆ.

ಈ ರೈಲು ಅಪಘಾತದಲ್ಲಿ ಹಜಾರಾ ಎಕ್ಸ್‌ಪ್ರೆಸ್‌ನ ಸುಮಾರು 10 ಬೋಗಿಗಳು ಹಳಿತಪ್ಪಿವೆ.

ಅಪಘಾತದಲ್ಲಿ ಒಟ್ಟು 20ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ರೈಲು ಕರಾಚಿಯಿಂದ ಪಂಜಾಬ್‌ಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ನೂರಾರು ಮಂದಿಗೆ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವರದಿ ಪ್ರಕಾರ ಮೃತರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎನ್ನಲಾಗುತ್ತಿದೆ.ವರದಿಗಳ ಪ್ರಕಾರ, ಗಾಯಾಳುಗಳನ್ನು ಚಿಕಿತ್ಸೆಗಾಗಿ ನವಾಬ್‌ಶಾಹ್‌ನಲ್ಲಿರುವ ಪೀಪಲ್ಸ್ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಬಗ್ಗೆ ಅಧಿಕಾರಿಗಳು ಹೇಳುವುದಾದರೆ, ಹಳಿ ತಪ್ಪಲು ಕಾರಣ ಇನ್ನೂ ತಿಳಿದುಬಂದಿಲ್ಲ.

Comments (0)
Add Comment