ಪಾಕಿಸ್ತಾನಿ ನುಸುಳುಕೋರನನ್ನು ಹತ್ಯೆಗೈದ ಬಿಎಸ್‌‌ಎಫ್

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಒಳ ನುಸುಳಲು ಯತ್ನಿಸಿದ ಪಾಕಿಸ್ತಾನಿ ನುಸುಳುಕೋರನನ್ನು ಬಿಎಸ್‌‌ಎಫ್ ಪಡೆ ಹೊಡೆದುರುಳಿಸಿರುವ ಘಟನೆ ನಡೆದಿದೆ.

ಅರ್ನಿಯಾ ಸೆಕ್ಟರ್‌ನ ಜಬೋವಾಲ್ ಗಡಿ ಹೊರಠಾಣೆ ಬಳಿ ಒಳನುಸುಳಲು ಯತ್ನಿಸಿದ ವೇಳೆ ಗಡಿ ಭದ್ರತಾ ಎಚ್ಚರಿಕೆ ನೀಡಿದ್ದು ಇದರ ಹೊರತಾಗಿಯೂ ಒಳನುಸುಳಲು ಯತ್ನಿಸಿದ ವೇಳೆ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಗಡಿ ಪ್ರದೇಶದಲ್ಲಿ ಭದ್ರತಾ ಪಡೆಗಳಿಂದ ಶೋಧ ಕಾರ್ಯ ಮುಂದುವರೆದಿದ್ದು,ಇದಕ್ಕೂ ಮೊದಲು ಜುಲೈ 25 ರಂದು ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್‌ನಲ್ಲಿ ಇದೆ ರೀತಿಯ ಘಟನೆ ನಡೆದಿತ್ತು.

Comments (0)
Add Comment