ಫಾಕ್ಸ್ ಕಾರ್ಪ್‌ಗೆ ಮಾಧ್ಯಮ ದೊರೆ ರೂಪರ್ಟ್ ರಾಜೀನಾಮೆ

ನ್ಯೂಯಾರ್ಕ್: ಮಾಧ್ಯಮ ದೊರೆ ಎಂದೇ ಖ್ಯಾತರಾಗಿರುವ ರೂಪರ್ಟ್ ಮುರ್ಡೋಕ್ (92ವರ್ಷ) ಫಾಕ್ಸ್ ಕಾರ್ಪ್ ಮತ್ತುನ್ಯೂಸ್ ಕಾರ್ಪ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನ್ಯೂಸ್ ಕಾರ್ಪ್‌ನ ಸಹ-ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರೂಪರ್ಟ್ ಅವರ ಹಿರಿಯ ಮಗ ಲಾಚ್ಲಾನ್ ಮುರ್ಡೋಕ್ ಅವರು ಕಂಪನಿಗಳ ಮುಂದಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ಗುರುವಾರ ವರದಿ ಮಾಡಿದೆ.

‘ನನ್ನ ತಂದೆ ನನಗೆ ಚೇರ್‌ಮನ್‌ ಎಮೆರಿಟಸ್ ಆಗಿ ಸಲಹೆ ನೀಡುವುದನ್ನು ಮುಂದುವರಿಸುತ್ತಾರೆ ಎಂದು ಭಾವಿಸುತ್ತೇವೆ’ ಎಂದು ಲಾಚ್ಲಾನ್‌ ಹೇಳಿದ್ದಾರೆ. $17.4 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿರುವ ರೂಪರ್ಟ್, ಈ ಎರಡೂ ಕಂಪನಿಗಳ ಷೇರುಗಳನ್ನು ನಿಯಂತ್ರಿಸುತ್ತಿದ್ದಾರೆ.

ಆಸ್ಟ್ರೇಲಿಯಾ ಮೂಲದ ಮುರ್ಡೋಕ್, 1952 ರಲ್ಲಿ ತನ್ನ ತಂದೆಯ ಮರಣದ ನಂತರ ನ್ಯೂಸ್ ಲಿಮಿಟೆಡ್​ನ ನಿರ್ದೇಶಕರಾದರು. ಆಸ್ಟ್ರೇಲಿಯಾದ ಸಣ್ಣ ಸಂಸ್ಥೆಯೊಂದರ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಮುರ್ಡೋಕ್ ಇಂದು ವಿಶ್ವದ ಎರಡನೇ ಅತಿದೊಡ್ಡ ಮಾಧ್ಯಮ ಸಮೂಹವಾದ ನ್ಯೂಸ್ ಕಾರ್ಪ್​ನ ಅಧ್ಯಕ್ಷರಾಗಿದ್ದಾರೆ. 2020 ರ ಹೊತ್ತಿಗೆ, ಮುರ್ಡೋಕ್ ಸುಮಾರು 50 ದೇಶಗಳಲ್ಲಿ 800 ಕ್ಕೂ ಹೆಚ್ಚು ಕಂಪನಿಗಳ ಮಾಲೀಕರಾಗಿದ್ದರು.

Comments (0)
Add Comment