ಫೇಸ್‌ಬುಕ್‌ ಫ್ರೆಂಡ್‌ಗಾಗಿ ಪಾಕಿಸ್ತಾನಕ್ಕೆ ತೆರಳಿ ಆತನನ್ನು ಮದುವೆಯಾದ ಎರಡು ಮಕ್ಕಳ ಭಾರತೀಯ ತಾಯಿ

ಪೇಶಾವರ: ಫೇಸ್‌ಬುಕ್‌ ಸ್ನೇಹಿತನಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಭಾರತೀಯ ಎರಡು ಮಕ್ಕಳ ತಾಯಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಫೇಸ್‌ಬುಕ್‌ ಗೆಳೆಯನನ್ನು ಮದುವೆಯಾಗಿದ್ದಾಳೆ.

ರಾಜಸ್ಥಾನದ ಭಿವಾಡಿ ಜಿಲ್ಲೆಯ 34 ವರ್ಷದ ಮಹಿಳೆ ಅಂಜು ಫೇಸ್‌ಬುಕ್​ನಲ್ಲಿ ಪರಿಚಯವಾದ ಪಾಕಿಸ್ತಾನದ ಅಪ್ಪರ್ ದಿರ್ ಜಿಲ್ಲೆಯ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ನಸ್ರುಲ್ಲಾ ಎಂಬಾತನನ್ನು ಭೇಟಿಯಾಗಲು ಪಾಕ್​ಗೆ ತೆರಳಿದ್ದರು. ಬಳಿಕ ವಾಟ್ಸ್​ಆ್ಯಪ್​ ಕರೆ ಮಾಡಿ ನಾನು ಲಾಹೋರ್​ನಲ್ಲಿದ್ದೇನೆ 34 ದಿನದಲ್ಲಿ ಬರುವುದಾಗಿ ಹೇಳಿದ್ದಳು ಎಂದು ಆಕೆಯ ಪತಿ ಅರವಿಂದ್‌ಗೆ ತಿಳಿಸಿದ್ದರು.

ನಸ್ರುಲ್ಲಾ ಮತ್ತು ಅಂಜು ವಿವಾಹವನ್ನು ಮಂಗಳವಾರ ಇಸ್ಲಾಂ ಪದ್ಧತಿಯಂತೆ ನಿಕಾಹ್ ವಿಧಿವತ್ತಾಗಿ ನಡೆಸಲಾಯಿತು. ಅವರು ಇಸ್ಲಾಂಗೆ ಮತಾಂತರಗೊಂಡ ನಂತರ ವಿವಾಹ ಮಾಡಲಾಗಿದೆ  ಎಂದು ಅಪ್ಪರ್ ದಿರ್ ಜಿಲ್ಲೆಯ ಮೊಹರಾರ್ ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಮುಹಮ್ಮದ್ ವಹಾಬ್ ಅಲ್ಲಿನ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.

ಭಾರತೀಯ ಮಹಿಳೆ ಅಂಜು ಇಸ್ಲಾಂಗೆ ಮತಾಂತರಗೊಂಡ ನಂತರ ಫಾತಿಮಾ ಎಂದು ಹೆಸರು ಬದಲಿಸಲಾಗಿದೆ ಪೊಲೀಸ್ ಭದ್ರತೆಯಲ್ಲಿ ವಿವಾಹ ನಡೆದಿದೆ. ನಾನು ಯಾವುದೇ ಬಲವಂತವಿಲ್ಲದೇ ನಿಕಾಹ್​ಗೆ ಸಹಿ ಹಾಕಿದ್ದೇನೆ ತಾನು ಸ್ವಇಚ್ಛೆಯಿಂದ ಪಾಕಿಸ್ತಾನಕ್ಕೆ ಬಂದಿದ್ದೇನೆ ಇಲ್ಲಿ ತುಂಬಾ ಸಂತೋಷವಾಗಿದ್ದೇನೆ ಎಂದು ಫಾತಿಮಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

 

Comments (0)
Add Comment