ಬೆಳಗಾವಿಯಲ್ಲಿ ವಿದ್ಯಾರ್ಥಿಗಳಿಂದ ಶಕ್ತಿ ಪ್ರದರ್ಶನ ; ಕೈ ತೋರಿಸಿದ್ರೂ ನಿಲ್ಲಿಸದ ಬಸ್ ಮೇಲೆ ಕಲ್ಲು ತೂರಾಟ..!

ಕೈ ತೋರಿದರೂ ನಿಲ್ಲಿಸದ ಬಸ್‌ ಮೇಲೆ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ ಘಟನೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ: ಕೈ ತೋರಿದರೂ ನಿಲ್ಲಿಸದ ಬಸ್‌ ಮೇಲೆ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ ಘಟನೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ನಡೆದಿದೆ.

ಕೈ ತೋರಿಸಿದರೂ ಬಸ್‌ ನಿಲ್ಲಸದೇ ಹೋಗಿದ್ದಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಕಲ್ಲೆಸೆದಿದ್ದಾರೆ.

ಇದರಿಂದಾಗಿ ಬಸ್‌ನ ಹಿಂಭಾಗದ ಗಾಜು ಪುಡಿ ಪುಡಿಯಾಗಿದೆ. ದೊಡವಾಡ ಗ್ರಾಮದಿಂದ ಬೈಲಹೊಂಗಲಕ್ಕೆ ಬಸ್ ಹೊರಟಿತ್ತು.

ವಿದ್ಯಾರ್ಥಿಗಳು ಬಸ್‌ ನಿಲ್ಲಿಸುವಂತೆ ಕೈ ತೋರಿಸಿದ್ದಾರೆ. ಆದರೆ ಚಾಲಕ ನಿಲ್ಲಿಸದೆ ಬಸ್‌ ಮುಂದಕ್ಕೆ ಹೋಗಿದೆ.

ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಬಸ್ಸಿಗೆ ಕಲ್ಲು ಎಸೆದು ಆಕ್ರೋಶ ಹೊರ ಹಾಕಿದ್ದಾರೆ.

ಕಾಲೇಜು ವಿದ್ಯಾರ್ಥಿಗಳು ಹಾಗೂ ಚಾಲಕ, ನಿರ್ವಾಹಕರ ಮಧ್ಯೆ ಮಾತಿನ‌ ಚಕಮಕಿ ನೀಡಿದೆ.

ಕೆಲಕಾಲ ಸ್ಥಳದಲ್ಲಿ ವಾತಾವರಣ ಉದ್ವಿಗ್ನಗೊಂಡಿತ್ತು.

ದಾರಿ ಮಧ್ಯೆ ಬಸ್‌ ತಡೆದು ವಿದ್ಯಾರ್ಥಿಗಳು ಪ್ರತಿಭಟಿಸಿದರು. ರಸ್ತೆ ಮಧ್ಯೆ ಬಸ್‌ ನಿಂತಿದ್ದರಿಂದ ಟ್ರಾಫಿಕ್‌ಜಾಮ್‌ ಉಂಟಾಗಿತ್ತು.

ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ರಾಜ್ಯ ಸರ್ಕಾರದ “ಶಕ್ತಿ” ಯೋಜನೆ ಜಾರಿಗೆ ಬಂದ ಮೇಲೆ ಕೆಎಸ್‌ಆರ್‌ಟಿಸಿ ಬಸ್‌ಗಳು (KSRTC Bus) ತುಂಬಿ ತುಳುಕುತ್ತಿವೆ.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರ್ಕಾರಿ ಬಸ್‌ಗಳನ್ನು ಹತ್ತುತ್ತಿದ್ದಾರೆ.

ಆದರೆ,ಇದು ಇನ್ನೊಂದು ವರ್ಗವಾದ ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಬಹಳವೇ ತೊಂದರೆಯನ್ನು ಕೊಡುತ್ತಿದೆ.

ಒಂದೋ ರಶ್‌ ಇರುವ ಬಸ್ಸನ್ನೇ ಹತ್ತಬೇಕು.

ಅಲ್ಲಿ ಜಾಗವಿಲ್ಲದೇ ಇದ್ದರೆ ಇನ್ನೊಂದು ಬಸ್‌ ಬರುವ ತನಕ ಕಾಯಬೇಕಾದ ಪರಿಸ್ಥಿತಿ ರಾಜ್ಯಾದ್ಯಾಂತ ನಿರ್ಮಾಣ ವಾಗಿದೆ.

 

Comments (0)
Add Comment