‘ಭಾರತಕ್ಕೆ ಡ್ರಗ್ಸ್ ಕಳ್ಳಸಾಗಣೆ ಮಾಡಲು ಡ್ರೋನ್‌ ಬಳಸಲಾಗುತ್ತಿದೆ’ – ಒಪ್ಪಿಕೊಂಡ ಪಾಕ್ ​

ನವದೆಹಲಿ: ಪಾಕಿಸ್ತಾನದಿಂದ ಭಾರತಕ್ಕೆ ಡ್ರೋನ್​ ಮೂಲಕ ಡ್ರಗ್ಸ್​​​ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಪಾಕ್​​ ಪ್ರಧಾನಿ ಶೆಹಬಾಜ್​​ ಪರೀಷ್​​ ಅವರ ಸಲಹೆಗಾರ ಒಪ್ಪಿಕೊಂಡಿರುವುದಗಿ ವರದಿಯಾಗಿದೆ.

ಡ್ರಗ್ಸ್​​​ ಕಳ್ಳಸಾಗಣೆ ಮಾಡಲಾಗುತ್ತಿಲ್ಲ ಎಂದು ಈ ಹಿಂದೆ ಪಾಕಿಸ್ತಾನ ಮೊಂಡುವಾದವನ್ನು ಮಾಡಿತ್ತು. ಆದರೆ ಇದೀಗ ಮಾದಕವಸ್ತುಗಳ ಕಳ್ಳಸಾಗಣೆಯ ಬಗ್ಗೆ ಮೊದಲ ಬಾರಿಗೆ ಪಾಕ್​​ ಒಪ್ಪಿಕೊಂಡಿದೆ.

ಈ ಕುರಿತು ಗಡಿಯಲ್ಲಿರುವ ಕಸೂರ್ ನಗರದಲ್ಲಿ ಪ್ರವಾಹ ಪರಿಸ್ಥಿತಿ ಕುರಿತು ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್, ಪ್ರಧಾನಿ ಸಲಹೆಗಾರ ಮಲಿಕ್ ಮುಹಮ್ಮದ್ ಅಹ್ಮದ್ ಖಾನ್ ಅವರೊಂದಿಗೆ ಮಾತನಾಡುತ್ತಿರುವಾಗ ಡ್ರಗ್ಸ್ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.

ಇನ್ನು ಇತ್ತೀಚೆಗೆ ತಲಾ ಎರಡು ಡ್ರೋನ್‌ಗಳಲ್ಲಿ 10 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ಕಟ್ಟಿ ಭಾರತಕ್ಕೆ ಕಳುಹಿಸಲಾಗಿತ್ತು ಎಂದು ವರದಿಯಾಗಿದೆ.

Comments (0)
Add Comment