ಭಾರತದ ಕುಸ್ತಿ ಫೆಡರೇಶನ್ ಸದಸ್ಯತ್ವ ಅನಿರ್ದಿಷ್ಟಾವಧಿಗೆ ಅಮಾನತು – ವಿಶ್ವ ಕುಸ್ತಿ ಸಂಸ್ಥೆ ಕ್ರಮ

ನವದೆಹಲಿ: ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಸಂಸ್ಥೆಯು ಭಾರತೀಯ ಕುಸ್ತಿ ಫೆಡರೇಷನ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಭಾರತದ ಕುಸ್ತಿ ಒಕ್ಕೂಟದ ಸದಸ್ಯತ್ವವನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದೆ.

ಡಬ್ಲ್ಯುಎಫ್‌ಐ ವಿವಾದಗಳ ಸರಣಿಯಲ್ಲಿ ಸಿಲುಕಿಕೊಂಡಿದ್ದು, ಅದರ ಚುನಾವಣೆಗಳನ್ನು ಮುಂದೂಡುವಂತೆ ಮಾಡಿತ್ತು. ಜೂನ್ 2023 ರಲ್ಲಿ ಚುನಾವಣೆಗಳನ್ನು ನಡೆಸಬೇಕಿತ್ತು. ನಿಗದಿತ ಸಮಯಕ್ಕೆ ಚುನಾವಣೆ ನಡೆಯದ ಕಾರಣ ಅವರು ಈ ಕ್ರಮ ಕೈಗೊಳ್ಳಲಾಗಿದೆ.

ಭಾರತೀಯ ಕುಸ್ತಿಪಟುಗಳ ಸರಣಿ ಪ್ರತಿಭಟನೆಗಳು ಮತ್ತು ವಿವಿಧ ರಾಜ್ಯ ಘಟಕಗಳ ಕಾನೂನು ಅರ್ಜಿಗಳ ಕಾರಣದಿಂದಾಗಿ ಚುನಾವಣೆಗಳನ್ನು ಪದೇ ಪದೇ ಮುಂದೂಡಲಾಗಿತು.

ಚುನಾವಣೆಗಳು ವಿಳಂಬವಾದರೆ ಅಮಾನತುಗೊಳಿಸುವುದಾಗಿ WFI ಗೆ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಈ ಹಿಂದೆ ಎಚ್ಚರಿಕೆ ನೀಡಿತ್ತು.

Comments (0)
Add Comment