ಭಾರತ ಕೊಟ್ಟ ಅಧ್ಯಕ್ಷೀಯ ಸೂಟ್ ನಿರಾಕರಿಸಿದ್ದ ಜಸ್ಟಿನ್ ಟ್ರುಡೋ

ನವದೆಹಲಿ: ಜಿ20 ಶೃಂಗ ಸಭೆ ನಡೆದಿದ್ದ ವೇಳೆ ಭಾರತ ಸರಕಾರದಿಂದ ಕೊಡಲಾಗಿದ್ದ ಅಧ್ಯಕ್ಷೀಯ ಧಿರಿಸನ್ನು ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೋ ನಿರಾಕರಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಜಿ20 ಶೃಂಗ ಸಭೆಯಲ್ಲಿ ಭಾಗವಹಿಸಲು ವಿಶೇಷವಾಗಿ ಜಸ್ಟಿನ್ ಟ್ರುಡೋ ಅವರಿಗಾಗಿಯೇ ಸಿದ್ಧಪಡಿಸಲಾಗಿತ್ತು ಎನ್ನಲಾಗಿದೆ. ದೆಹಲಿಯ ಲಲಿತ್ ಹೊಟೇಲ್‌ನಲ್ಲಿ ಈ ಸಂಗತಿ ನಡೆದಿದೆ. ನೀವು ಸಭೆಗೆ ಬಂದ ಮೇಲೆ ಭಾರತದ ಪ್ರೊಟೋಕಾಲ್‌ಗಳನ್ನು ಅನುಸರಿಸಬೇಕೆಂದು ತಿಳಿಸಿದರೂ ಅದಕ್ಕೆ ಟ್ರುಡೋ ಸ್ಪಂದಿಸಿಲ್ಲ. ಅಲ್ಲದೇ ಲಲಿತ್ ಹೊಟೇಲ್‌ನಲ್ಲಿ ಅವರಿಗೆ ಕಾದಿರಿಸಲಾಗಿದ್ದ ಕೋಣೆಯಲ್ಲಿ ತಂಗದೇ ಅವರು ಬೇರೊಂದು ಕೋಣೆಯಲ್ಲಿ ತಂಗಿದ್ದರು. ಇದರ ಖರ್ಚನ್ನು ಕೆನಡಾ ಅಧಿಕಾರಿಗಳೇ ಭರಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

Comments (0)
Add Comment