ಭಾರೀ ಮಳೆಯಿಂದ ಮಂಗಳೂರು ನಗರ ಪ್ರದೇಶದ ಹಲವೆಡೆ ಜಲಾವೃತ..!

ಮಂಗಳೂರು: ಸೋಮವಾರ ಬೆಳಗ್ಗಿನಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಂಗಳೂರು ನಗರ ಪ್ರದೇಶದ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ.ಭಾರೀ ಮಳೆಗೆ ಪಂಪ್ ವೆಲ್, ಕೊಟ್ಟಾರ ಚೌಕಿ, ಮಾಲೆಮಾರ್ ಪ್ರದೇಶ ಜಲಾವೃತವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಪಂಪ್‌ವೆಲ್ ಮೇಲ್ಸೇತುವೆ ಕೆಳಗೆ ಮೊಣಕಾಲು ಎತ್ತರಕ್ಕೆ ನೀರು ನಿಂತಿದ್ದು ನಗರದ ಕಡೆ ಸಂಚರಿಸುವ ವಾಹನಗಳು ಜಂಕ್ಷನ್‌ನಲ್ಲಿ ಸಿಲುಕಿಕೊಂಡಿವೆ.ನಗರದ ಬಿಜೈನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ದುರಸ್ತಿಗಾಗಿ ಮ್ಯಾನ್ ಹೋಲ್ ಅಗೆದಿಟ್ಟುರುವುದ್ದರಿಂದ ಭಾರೀ ಮಳೆಯಿಂದಾಗಿ ಗಲೀಜು ನೀರಿನ ಜತೆ ಮಳೆ ನೀರು ಸುತ್ತಮುತ್ತಲಿನ ಬ್ಯಾಂಕ್, ಮೆಡಿಕಲ್‌ನೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.ಇಂಡಿಯನ್ ಬ್ಯಾಂಕ್‌ನೊಳಗೆ ನೀರು ನುಗ್ಗಿ ಬ್ಯಾಂಕ್ ಸಿಬ್ಬಂದಿಗಳು ಕಡತಗಳು ಹಾಗೂ ಇನ್ನು ಪಕ್ಕದಲ್ಲಿದ್ದ ಎಟಿಎಂ ಮಷಿನ್‌ನಲ್ಲಿದ್ದ ಹಣವನ್ನು ಕೂಡ ಸ್ಥಳಾಂತರಿಸಿದ್ದಾರೆ.ಪಕ್ಕದಲ್ಲಿದ್ದ ಹೋಟೇಲ್ ಹಾಗೂ ಮೆಡಿಕಲ್‌ಗಳಿಗೂ ಗಲೀಜು ನೀರು ನುಗ್ಗಿ ಸಮಸ್ಯೆಯಾಗಿದೆ. ಕಳೆದ ಹಲವಾರು ದಿನಗಳಿಂದ ಮ್ಯಾನ್ ಹೋಲ್ ದುರಸ್ತಿಯಾಗುತ್ತಿದ್ದು ಇನ್ನು ಕೂಡ ಪೂರ್ಣವಾಗಿಲ್ಲ ಜತೆಗೆ ದಿನನಿತ್ಯ ಈ ಭಾಗದಲ್ಲಿ ಸಂಚರಿಸುವ ಮತ್ತು ವ್ಯಾಪಾರ ವ್ಯವಹಾರ ನಡೆಸುವ ಜನರಿಗೆ ಗಲೀಜು ನೀರಿನ ದುರ್ನಾತದಿಂದ ಸಮಸ್ಯೆಯಾಗುತ್ತಿದೆ.

Comments (0)
Add Comment