ಮಂಗಳೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ಭದ್ರತೆ ಹೆಚ್ಚಿಸಿ: ಶಾಸಕ ಕಾಮತ್ ಆಗ್ರಹ..!

ಮಂಗಳೂರು :ಉಗ್ರರ ಟಾರ್ಗೆಟ್ ಆಗಿರುವ ಮಂಗಳೂರಿನ ಪ್ರಸಿದ್ಧ ದೇವಾಲಯಗಳು ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ಜನನಿಬಿಡ ಧಾರ್ಮಿಕ ಕ್ಷೇತ್ರಗಳ ಭದ್ರತೆ ಹೆಚ್ಚಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಶಿವಮೊಗ್ಗದ ಅರಾಫತ್ ಅಲಿಯನ್ನು ಎನ್‌ಐಎ ಬಂಧಿಸುವ ಮೂಲಕ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಪ್ರಮುಖ ಟಾರ್ಗೆಟ್ ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಮಂಜುನಾಥ ದೇವಾಲಯವೇ ಆಗಿತ್ತು ಎನ್ನುವದು ಎನ್‌ಐಎ ತನಿಖೆಯಿಂದ ದೃಢಪಟ್ಟಿದೆ.

ತನಿಖೆ ಇನ್ನಷ್ಟು ಚುರುಕುಗೊಂಡು ದೇಶದ ವಿರುದ್ಧ ಷಡ್ಯಂತ್ರ ನಡೆಸುವವರನ್ನು ಮಟ್ಟ ಹಾಕಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಆಗ್ರಹಿಸಿದರು.

ಈ ಅರಾಫತ್‌ ಅಲಿ ಯ ಪ್ರಚೋದನೆಯಿಂದಲೇ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ, ಉಗ್ರ ಕೃತ್ಯಕ್ಕೆ ಸಂಬಂಧಿಸಿದ ಗೋಡೆ ಬರಹಗಳು ಸೇರಿದಂತೆ ರಾಜ್ಯದ ಇನ್ನಿತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯ ನಡೆದಿರುವುದು ಎನ್‌ಐಎ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಇನ್ನು ಸದಾ ಇಂತಹ ಆರೋಪಿಗಳ ಪರ ವಹಿಸಿಕೊಂಡು ಮಾತನಾಡುವ ಕಾಂಗ್ರೆಸ್ ನಾಯಕರು ಈಗ ಏನು ಹೇಳುತ್ತಾರೆ? ಇನ್ನಾದರೂ ಉಗ್ರ ಕೃತ್ಯಗಳಿಗೆ ಸಂಬಂಧಿಸಿ ಹೇಳಿಕೆ ಕೊಡುವಾಗ ಓಲೈಕೆ ರಾಜಕಾರಣ ಮಾಡುವುದನ್ನು ಬಿಟ್ಟು ವಿಷಯದ ಗಂಭೀರತೆ, ಸೂಕ್ಷ್ಮತೆ ಅರಿತು ಮಾತನಾಡಬೇಕು.

ಇದೇ ವೇಳೆ ಉಗ್ರರ ಟಾರ್ಗೆಟ್ ಆಗಿರುವ ಮಂಗಳೂರಿನ ಪ್ರಸಿದ್ಧ ದೇವಾಲಯಗಳು ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ಜನನಿಬಿಡ ಧಾರ್ಮಿಕ ಕ್ಷೇತ್ರಗಳ ಭದ್ರತೆ ಹೆಚ್ಚಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಆಗ್ರಹಿಸಿದರು.

Comments (0)
Add Comment