ಮಂಗಳೂರು: ಎನ್ಎಂಪಿಎಗೆ ಬಂದಿಳಿದ ಪನಾಮ ನೌಕೆ

ಮಂಗಳೂರು: ಎನ್ಎಂಪಿಎಗೆ ಪನಾಮದಿಂದ ಎಂಎಸ್‌ಸಿ ಮಾಕೊಟೊ-2 ನೌಕೆ ಬಂದಿಳಿದಿದೆ. ಈ ಹಡಗು ಈವರೆಗಿನ ಗರಿಷ್ಠ ಪ್ರಮಾಣದ ಒಟ್ಟು 2,689 ಟಿಇಯು ಕಂಟೇನರ್‌ಗಳನ್ನು ಒಳಗೊಂಡಿತ್ತು ಎಂದು ನವಮಂಗಳೂರು ಬಂದರು ನಿಗಮದ ಟ್ರಾಫಿಕ್ ವ್ಯವಸ್ಥಾಪಕರು ತಿಳಿಸಿದ್ದಾರೆ.

ನವಮಂಗಳೂರು ಬಂದರಿನ 14ನೇ ಬರ್ತ್‌ನಲ್ಲಿ ಯಾಂತ್ರೀಕೃತ ಚಟುವಟಿಕೆ ಆರಂಭಗೊಂಡಿದೆ. ಜೆಎಸ್‌ಡಬ್ಲ್ಯುನ ಮಂಗಳೂರು ಕಂಟೈನರ್‌ ಟರ್ಮಿನಲ್ ಜೊತೆಗೂಡಿ ಪಿಪಿಪಿ ಮಾದರಿಯಲ್ಲಿ ಇದನ್ನು ನಿರ್ವಹಿಸಲಾಗುತ್ತಿದೆ.

ಪ್ರತಾಪ್ ಸಿಂಹ ವಿರುದ್ದ ಅವಹೇಳನಾಕಾರಿ ಪೋಸ್ಟ್ – ಟ್ರಾಫಿಕ್ ಹೆಡ್ ಕಾನ್ಸ್​​ಟೇಬಲ್​ ಅಮಾನತು

ಇದರೊಂದಿಗೆ ವಲಯಮಟ್ಟದಲ್ಲಿ ಕಂಟೈನರ್ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2689 ಟಿಇಯು ಕಂಟೈನರ್‌ಗಳನ್ನು ನಿರ್ವಹಿಸುವುದರ ಮೂಲಕ ಬಂದರು ಮೈಲುಗಲ್ಲೊಂದನ್ನು ದಾಟಿದೆ. ಗ್ರಾಹಕರಿಗೆ ವಿಶ್ವದರ್ಜೆಯ ಸೇವೆಯನ್ನು ನೀಡುತ್ತಿರುವುದಕ್ಕೆ ಇದೊಂದು ನಿದರ್ಶನ ಎಂದು ನಿಗಮದ ಅಧ್ಯಕ್ಷ ಎ.ವಿ.ರಮಣ ಹೇಳಿದ್ದಾರೆ.

Comments (0)
Add Comment