ಮಣಿಪುರದಲ್ಲಿ ಭೂಕುಸಿತ, ಹೆದ್ದಾರಿ ಬಂದ್ : ನಿಂತಲ್ಲೇ ನಿಂತ ಟ್ರಕ್‌ಗಳು

ಇಂಫಾಲ್: ಮಣಿಪುರದ ನೊನೇ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಇಂಫಾಲ್‌–ಸಿಲ್ಛಾರ್‌ ಹೆದ್ದಾರಿ ಬಂದ್‌ ಆಗಿದ್ದು, ಕನಿಷ್ಠ 500 ಸರಕು ಸಾಗಣೆಯ ಟ್ರಕ್‌ಗಳು ನಿಂತಲ್ಲೇ ನಿಲ್ಲುವಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐರಾಂಗ್–ಅವಾಂಗ್‌ಖುಲ್‌, ಖಾಂಗ್‌ಸಂಗ್‌–ಅವಾಂಗ್‌ಖುಲ್‌ ಹಾಗೂ ರಂಗ್‌ಖುಯಿ ಗ್ರಾಮಗಳ ನಡುವೆ ಸಾಗಿರುವ ರಾಷ್ಟ್ರೀಯ ಹೆದ್ದಾರಿ–37ರಲ್ಲಿ ಭೂಕುಸಿತವಾಗಿದೆ.

Comments (0)
Add Comment