ಮಣಿಪುರ ಹಿಂಸಾಚಾರ: ಇಂಫಾಲ್ ಕೇಂದ್ರೀಕೃತ ಆರೋಗ್ಯ ವ್ಯವಸ್ಥೆ – ಜನ ಕಂಗಾಲು!

ಆರೋಗ್ಯ ವ್ಯವಸ್ಥೆಯು ರಾಜಧಾನಿಯಲ್ಲಿ ಹೆಚ್ಚು ಕೇಂದ್ರೀಕೃತವಾಗಿರುವ, ಅವಲಂಬಿತವಾಗಿರುವ ಮಣಿಪುರ ರಾಜ್ಯದಲ್ಲಿ, ಜನಾಂಗೀಯ ವಿಭಜನೆಯಿಂದಾಗಿ ಇಂಫಾಲ್‌ಗೆ ಪ್ರವೇಶಕ್ಕರ ಅಸಾಧ್ಯವಾಗಿರುವ ಮಣಿಪುರದ ರೋಗಿಗಳು ತೀವ್ರವಾಗಿ ಬಾಧಿತರಾಗಿದ್ದಾರೆ. ರಾಜ್ಯದ ಎರಡೂ ಸರ್ಕಾರಿ ಆಸ್ಪತ್ರೆಗಳು ಇಂಫಾಲ್‌ನಲ್ಲಿವೆ.ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಯು ರಾಜ್ಯ ಸರ್ಕಾರದಿಂದ ನಡೆಸಲ್ಪಡುತ್ತದೆ. ಕೇಂದ್ರದಿಂದ ನಡೆಸಲ್ಪಡುವ ಪ್ರಾದೇಶಿಕ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆ. ಶಿಜಾ ಹಾಸ್ಪಿಟಲ್ಸ್ ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ರಾಜ್ ಮೆಡಿಸಿಟಿಯಂತಹ ಉನ್ನತ ಖಾಸಗಿ ಆಸ್ಪತ್ರೆಗಳು ಸಹ ರಾಜಧಾನಿಯಲ್ಲಿವೆ. ಇದು ಮೈಥೆಯಿ ಪ್ರಾಬಲ್ಯ ಹೊಂದಿರುವ ಪ್ರದೇಶ. ಹಾಗಾಗಿ ಪ್ರಸ್ತುತ ಬೆಟ್ಟಗಳಲ್ಲಿ ವಾಸಿಸುವ ಕುಕಿ-ಜೋಮಿ ಸಮುದಾಯಕ್ಕೆ ಅಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ. ಕಣಿವೆಯ ಹೊರಗೆ, ಕುಕಿ-ಜೋಮಿ ಪ್ರಾಬಲ್ಯದ ಪಟ್ಟಣದ ಹೃದಯಭಾಗದಲ್ಲಿರುವ ಚುರಾಚಂದ್‌ಪುರ ಜಿಲ್ಲಾ ಆಸ್ಪತ್ರೆಯು ಅತ್ಯಂತ ದೊಡ್ಡ ಸರ್ಕಾರಿ ಆಸ್ಪತ್ರೆಯಾಗಿದೆ. ಸಾಮಾನ್ಯ ಸಮಯದಲ್ಲಿ ಇಂಫಾಲ್‌ನಿಂದ ಕೇವಲ ಒಂದು ಗಂಟೆಯ ಪ್ರಯಾಣವಿದ್ದರೂ, ಆಸ್ಪತ್ರೆಯ ವೈದ್ಯರು ಮತ್ತು ಪಟ್ಟಣದ ರೋಗಿಗಳು ರಾಜಧಾನಿಯಲ್ಲಿನ ಸಂಪನ್ಮೂಲಗಳಿಂದ ಎಂದಿಗೂ ಹೆಚ್ಚು ಬೇರ್ಪಟ್ಟಿಲ್ಲ ಎಂದು ಹೇಳುತ್ತಾರೆ. “ನಮಗೆ ಇಲ್ಲಿ ಹಲವು ಕೊರತೆಗಳಿವೆ ಆದರೆ ಇಂಫಾಲ್ ತುಂಬಾ ಹತ್ತಿರದಲ್ಲಿರುವುದರಿಂದ ತಿಳಿಯುತ್ತಿರಲಿಲ್ಲ. ಈಗ ಸಮಸ್ಯೆ  ತುಂಬಾ ಸ್ಪಷ್ಟವಾಗಿ ಗೋಚರಿಸಿದೆ ”ಎಂದು ಜಿಲ್ಲಾ ಆಸ್ಪತ್ರೆಯ ಹಿರಿಯ ವೈದ್ಯ ಡಾ ಬಿಯಾಕ್ಡಿಕಿ ಹೇಳಿದರು. OPD ಸಮಯದಲ್ಲಿ ಆಸ್ಪತ್ರೆಯು ರೋಗಿಗಳಿಂದ ತುಂಬಿರುತ್ತದೆ. ಆದರೆ ನಿಜವಾದ ಬಿಕ್ಕಟ್ಟು, ತಜ್ಞರ ಕೊರತೆ ಎಂದು ವೈದ್ಯರು ಹೇಳಿದರು. ವಾರದಲ್ಲಿ ಕೆಲವು ಬಾರಿ ಆಸ್ಪತ್ರೆಗೆ ಭೇಟಿ ನೀಡುವ ಆಂಕೊಲಾಜಿಸ್ಟ್ ಸೇರಿದಂತೆ ಅನೇಕ ಸೂಪರ್ ಸ್ಪೆಷಲಿಸ್ಟ್‌ಗಳು ಇಂಫಾಲ್‌ನಲ್ಲಿ ನೆಲೆಸಿರುವ ಮೈಥೆಯಿಗಳಾಗಿದ್ದಾರೆ. ಈಗ, ವಿಶೇಷ ಆರೈಕೆ ಮತ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳು ರಾಜ್ಯದ ಹೊರಗೆ ಹೋಗಬೇಕಾಗಿ ಬಂದಿದೆ. ಮಿಜೋರಾಂ ರಾಜಧಾನಿ ಐಜ್ವಾಲ್ ಹತ್ತಿರದ ತಾಣವಾಗಿದೆ. ಕಷ್ಟಕರವಾದ ಬೆಟ್ಟದ ರಸ್ತೆಗಳಲ್ಲಿ 12 ಗಂಟೆಗಳ ಪ್ರಯಾಣ. ಆಸ್ಪತ್ರೆಯ ವೈದ್ಯರ ಪ್ರಕಾರ, ಸಂಘರ್ಷದ ಸಂದರ್ಭದಲ್ಲಿ ಎದೆಗೆ ಗುಂಡು ತಗುಲಿದ ಆರು ರೋಗಿಗಳನ್ನು ಹೃದಯ-ಥೊರಾಸಿಕ್ ಶಸ್ತ್ರಚಿಕಿತ್ಸೆಗೆ ಸೌಲಭ್ಯಗಳ ಕೊರತೆಯಿಂದಾಗಿ ಗುವಾಹಟಿಗೆ ವಿಮಾನದಲ್ಲಿ ಕಳುಹಿಸಲಾಗಿದೆ ಎಂಬ ಮಾಹಿತಿ‌ ಲಭ್ಯವಾಗಿದೆ.

Comments (0)
Add Comment