ಮತ್ತೆ ನಟಿ ಸಮಾಂತಾ ಹಾಗೂ ನಾಗಚೈತನ್ಯ ಒಂದಾಗುವ ಸೂಚನೆಯೇ?

ಮುಂಬೈ: ಟಾಲಿವುಡ್ ನಟ ನಾಗಚೈತನ್ಯ 2ನೇ ಮದುವೆಯಾಗ್ತಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಸಮಂತಾ ಖಾಸಗಿ ಖಾತೆಯಲ್ಲಿ ನಾಗಚೈತನ್ಯ ಜೊತೆಗಿನ ಮದುವೆ ಫೋಟೋವನ್ನ ಶೇರ್ ಮಾಡಿದ್ದಾರೆ. ಇಬ್ಬರ ಮದುವೆಯ ಹಳೆಯ ಫೋಟೋ ವೈರಲ್ ಆಗುತ್ತಿದ್ದಂತೆ ಈ ಜೋಡಿ ಮತ್ತೆ ಒಂದಾಗಲಿದ್ದಾರೆ ಎಂಬ ವಿಚಾರ ಚರ್ಚೆಗೆ ಎಡೆಮಾಡಿ ಕೊಟ್ಟಿದೆ.

ಈ ಹಿಂದೆ ಖ್ಯಾತ ಉದ್ಯಮಿ ಪುತ್ರಿ ಜೊತೆ ನಾಗಚೈತನ್ಯ 2ನೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಸುದ್ದಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸಮಂತ್‌ ಮತ್ತು ನಾಗಚೈತನ್ಯ ಮದುವೆ ಫೋಟೋ ಮತ್ತೆ ಸಮಂತಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫ್ಯಾನ್ಸ್‌ ಈ ಪೋಸ್ಟ್ ನೋಡ್ತಿದ್ದಂತೆ ಸಮಂತಾ- ಚೈತನ್ಯ ಮತ್ತೆ ಜೊತೆಯಾಗುತ್ತಾರೆ ಎಂದು ಸಂಸತ ವ್ಯಕ್ತಪಡಿಸುತ್ತಿದ್ದಾರೆ.

ಹಲವು ವರ್ಷಗಳ ಡೇಟಿಂಗ್ ಬಳಿಕ ಮದುವೆಯಾಗಿದ್ದ ಸಮಂತಾ- ನಾಗಚೈತನ್ಯ ಜೋಡಿ 2021ರಲ್ಲಿ ಡಿವೋರ್ಸ್ ಪಡೆದುಕೊಂಡರು. ಆಗಲೇ ಮಾಜಿ ಪತಿ ಜೊತೆಗಿನ ಒಂದೊಂದೇ ಫೋಟೋಗಳನ್ನ ಸಮಂತಾ ಇನ್ಸ್ಟಾಗ್ರಾಂನಲ್ಲಿ ಮರೆ ಮಾಚಿದ್ರು. ನಟಿಯ ನಡೆ ನೋಡಿ ಫ್ಯಾನ್ಸ್ ಡಿವೋರ್ಸ್ ಸಂಶಯ ವ್ಯಕ್ತಪಡಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಡಿವೋರ್ಸ್ ಆಗಿರುವ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡಿದ್ದರು.

ಅಂದು ಕಣ್ಮರೆಯಾಗಿದ್ದ ಫೋಟೋಗಳು ಈಗ ಮತ್ತೆ ಸ್ಯಾಮ್‌ ಖಾತೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ನೋಡಿದ್ರೆ ಈ ಜೋಡಿ ಮತ್ತೆ ಒಂದಾಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.

Comments (0)
Add Comment