ಮನೆಯವರು ಅಂತ್ಯಕ್ರಿಯೆಗೆ ಸಿದ್ದತೆ ನಡೆಸುವ ವೇಳೆ ಕಣ್ಣು ತೆರೆದ ಬಿಜೆಪಿ ಮುಖಂಡ

ಉತ್ತರ ಪ್ರದೇಶ: ಆಗ್ರಾದಲ್ಲಿ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಮಹೇಶ್ ಬಾಘೇಲ್ ಅವರ ಆರೋಗ್ಯ ತೀವ್ರ ಹದಗೆಟ್ಟಿ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಬಳಿಕ ಸ್ವಲ್ಪ ಸಮಯದ ನಂತರ ವೈದ್ಯರು ಬಾಘೇಲ್ ಅವರು ಮೃತಪಟ್ಟಿದ್ದಾರೆ ಘೋಷಿಸಿದರು. ಕುಟುಂಬದವರಿಗೆ ಶವವನ್ನು ಮನೆಗೆ ತೆಗೆದುಕೊಂಡು ಹೋಗಿ ಎಂದು  ಸೂಚಿಸಿದರು.

ಮನೆಗೆ ಮೃತದೇಹವನ್ನು ತಂದು ಅಂತ್ಯಕ್ರಿಯೆಗೆ ಸಿದ್ದತೆ ನಡೆಸುವ ವೇಳೆ ಬಿಜೆಪಿ ಮುಖಂಡ ಮಹೇಶ್​ ಬಾಘೇಲ್ ಕಣ್ಣು ತೆರೆದಿದ್ದಾರೆ. ಮನೆಯಲ್ಲಿ ಅಂತ್ಯಕ್ರಿಯೆಗೆ ತಯಾರಿ ನಡೆಯುತ್ತಿತ್ತು, ಆ ಸಮಯದಲ್ಲಿ ಬಾಘೇಲ್ ಅವರ ದೇಹದಲ್ಲಿ ಚಲನವಲಗಳು ಕಾಣಿಸಿತ್ತು.ಹೀಗಾಗಿ ಮತ್ತೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಬಾಘೇಲ್ ಕಣ್ಣು ತೆರೆದಾಗ ಸಂಬಂಧಿಕರು ರೋದಿಸುತ್ತಿದ್ದರು ಮತ್ತು ಅವರ ದೇಹದಲ್ಲಿ ಚಲನೆ ಕಂಡುಬಂದಿತ್ತು. ಇದನ್ನು ಕಂಡು ಖುಷಿ ಪಟ್ಟ ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುತ್ತಿದ್ದಾರೆ. ಸಹೋದರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಾಘೆಲ್ ಅವರ ಕಿರಿಯ ಸಹೋದರ ಲಖನ್ ಸಿಂಗ್ ಬಾಘೇಲ್ ತಿಳಿಸಿದ್ದಾರೆ. ಬಿಪಿ ಸಹಜ ಸ್ಥಿತಿಯೊಲ್ಲಿದೆ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.

ಮೊದಲು ಮಹೇಶ್ ಬಾಘೇಲ್ ಅವರನ್ನು ಪುಷ್ಪಾಂಜಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಬಳಿಕ ಅವರನ್ನು ಸರಾಯ್ ಖ್ವಾಜಾ ಅವರ ನಿವಾಸಕ್ಕೆ ಕರೆದೊಯ್ಯಲಾಯಿತು. ಮನೆ ತಲುಪಿದ ನಂತರ ಪ್ರಜ್ಞೆ ಬಂದು ಕಣ್ಣು ತೆರೆದರು ಎಂದು ಅವರ ಮಕ್ಕಳು ಹೇಳಿದರು.

ಇದನ್ನು ಕಂಡ ಕುಟುಂಬಸ್ಥರಲ್ಲಿ ಸಂತಸ ಮನೆಮಾಡಿತ್ತು. ಇದೀಗ ಬಾಘೇಲ್ ಅಹೀಗಾಗಿವರ ನಿಧನದ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲರೂ ಶ್ರದ್ಧಾಂಜಲಿ ಸಲ್ಲಿಸಲು ಪ್ರಾರಂಭಿಸಿದ್ದಾರೆ.

Comments (0)
Add Comment