ಮಿಸ್ ಇಟಲಿ ಸೌಂದರ್ಯ ಸ್ಪರ್ಧೆಯಿಂದ ಟ್ರಾನ್ಸ್‌ಜೆಂಡರ್ ಸ್ಪರ್ಧಿಗಳಿಗೆ ನಿಷೇಧ

ಮಿಸ್ ಇಟಲಿ ಸ್ಪರ್ಧೆಯು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಟ್ರಾನ್ಸ್‌ಜೆಂಡರ್ ಸ್ಪರ್ಧಿಗಳನ್ನು ನಿರ್ಬಂಧಿಸಿದೆ. ಈ ಬಗ್ಗೆ ಮಾತನಾಡಿರುವ ಸ್ಪರ್ಧೆಯ ಅಧಿಕೃತ ಪೋಷಕರಾದ ಪ್ಯಾಟ್ರಿಜಿಯಾ ಮಿರಿಗ್ಲಿಯಾನಿ, “ನನ್ನ ನಿಯಂತ್ರಣದಲ್ಲಿ, ಈ ಸಮಯದಲ್ಲಿ ನಾನು ಇನ್ನೂ ಟ್ರಾನ್ಸ್‌ಜೆಂಡರ್‌ಗಳಿಗೆ ಅವಕಾಶ ಕೊಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ, ರಿಕ್ಕಿ ವ್ಯಾಲೆರಿ ಕೊಲ್ಲೆ ಮಿಸ್ ನೆದರ್ಲ್ಯಾಂಡ್ಸ್ ಅನ್ನು ಗೆದ್ದ ಮೊದಲ ಟ್ರಾನ್ಸ್‌ಜೆಂಡರ್ ಆಗಿದ್ದಾರೆ. ಜುಲೈ 8ರಂದು ಮಿಸ್ ನೆದರ್ಲ್ಯಾಂಡ್ಸ್ ಅನ್ನು ಗೆದ್ದ ಮೊದಲ ಟ್ರಾನ್ಸ್‌ಜೆಂಡರ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ರಿಕ್ಕಿ ವ್ಯಾಲೆರಿ ಕೊಲ್ಲೆ ಇತಿಹಾಸವನ್ನು ಸೃಷ್ಟಿಸಿದ್ದರು.

Comments (0)
Add Comment