ಯಮುನೆಯ ನೀರಿನ ಮಟ್ಟ ಏರಿಕೆ ಮತ್ತೆ ಅಪಾಯದಲ್ಲಿ ದೆಹಲಿ

ನವದೆಹಲಿ:ಹರಿಯಾಣದಿಂದ 2 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಕಟ್ಟೆಚ್ಚರ ವಹಿಸಿದೆ.

ಹರಿಯಾಣದ ಹತ್ನ್‌ನಿಕುಂಡ್ ಬ್ಯಾರೇಜ್‌ ನಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಯಮುನಾ ನದಿಯ ನೀರಿನ ಮಟ್ಟ ಹೆಚ್ಚಿದೆ. ಮತ್ತೆ ದೆಹಲಿಯಲ್ಲಿ ಅಪಾಯ ಎದುರಾಗಲಿದೆ.

ಯಮುನ ಯನದಿಯಲ್ಲಿ 206.10 ಮೀಟರ್‌ ಗಳಷ್ಟು ನೀರು ಹರಿಯುತ್ತಿದೆ. ಸಂಜೆ ವೇಳೆಗೆ ಇನ್ನಷ್ಟುನೀರಿನ ಮಟ್ಟ ಏರುವ ಸಾಧ್ಯತೆ ಇದೆ. ಅರವಿಂದ್ ಕೇಜ್ರಿವಾಲ್ ಸರ್ಕಾರವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಅತಿಶಿ ಹೇಳಿದ್ದಾರೆ.

ಮಾನ್ಸೂನ್‌ ಬಿರುಸಿನಿಂದಾಗಿ ಯಮುನಾ ನದಿಯು ಈಗ ಒಂದು ವಾರದಿಂದ ಉಕ್ಕಿ ಹರಿಯುತ್ತಿದೆ. ಇದು ರಾಜಧಾನಿಯ ಹಲವಾರು ಭಾಗಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ.

Comments (0)
Add Comment