ರಷ್ಯಾದ ಲೂನಾ ಪತನ -ಹಿರಿಯ ವಿಜ್ಞಾನಿ ಆಸ್ಪತ್ರೆಗೆ ದಾಖಲು

ಮಾಸ್ಕೋ: ರಷ್ಯಾ ಕೈಗೊಂಡಿದ್ದ ಚಂದ್ರಯಾನ ನೌಕೆ ಲೂನಾ ತಾಂತ್ರಿಕ ದೋಷದಿಂದ ಚಂದ್ರನ ಮೇಲ್ಮೈ ಮೇಲೆ ಪತನಗೊಂಡಿದ್ದು, ಈ ಬೆಳವಣಿಗೆಯ ಬಳಿಕ ಇದಕ್ಕಾಗಿ ಕೆಲಸ ಮಾಡಿದ ಹಿರಿಯ ವಿಜ್ಞಾನಿ ಅವರ ಆರೋಗ್ಯ ತೀವ್ರ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಂತ್ರಿಕ ದೋಷದಿಂದಾಗಿ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಒಂದು ದಿನ ಮೊದಲೇ ರಷ್ಯಾದ ಲೂನಾ 25 ಬಾಹ್ಯಾಕಾಶ ನೌಕೆ ಪತನಗೊಂಡಿತ್ತು.

ವಿಜ್ಞಾನಿ ಮಿಖಾಯಿಲ್ ಮಾರೊವ್ ಅವರ ಮಿಷನ್ ವಿಫಲವಾದ ನಂತರ ಅವರ ಆರೋಗ್ಯದಲ್ಲಿ ತೀವ್ರ ಹದಗೆಟ್ಟ ಕಾರಣ ಶನಿವಾರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಿಜ್ಞಾನಿ ಸೋವಿಯತ್ ಒಕ್ಕೂಟದ ಹಿಂದಿನ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಿದ್ದರು.

ರಷ್ಯಾ ಆಗಸ್ಟ್​ 11 ರಂದು ಲೂನಾ 25 ನೌಕೆಯನ್ನ ಉಡಾವಣೆ ಮಾಡಿತ್ತು. ನೌಕೆಯು ಆಗಸ್ಟ್ 21 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬೇಕಿತ್ತು. ಫ್ರೀ ಲ್ಯಾಂಡಿಂಗ್ ಕಕ್ಷೆಯ ಬಳಿ ನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಯೋಜಿತ ಕಕ್ಷೆಗೆ ಹೋಗಲು ವಿಫಲವಾಗಿತ್ತು.

Comments (0)
Add Comment