ರಾಜ್ಯದ ಎಲ್ಲಾ ಬ್ಯಾಂಕ್ ಗಳಲ್ಲಿ ಕನ್ನಡ ಕಡ್ಡಾಯಗೊಳಿಸಲು ಸರ್ಕಾರದ ಚಿಂತನೆ – ಗ್ರಾಹಕರ ಭಾಷೆಯ ಸಮಸ್ಯೆಗೆ ಕಡಿವಾಣ

ಕೆಲ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಉತ್ತರ ಭಾರತದ ಸಿಬ್ಬಂದಿಗಳೇ ಹೆಚ್ಚಾಗಿದ್ದು ಕನ್ನಡಿಗರಿಗೆ ಭಾಷೆಯ ಸಮಸ್ಯೆ ಆಗೋದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಬ್ಯಾಂಕ್ ಗಳಲ್ಲೂ ಇನ್ಮುಂದೆ ಕನ್ನಡ ಕಡ್ಡಾಯಗೊಳಿಸಲು ಹೊಸ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ.

ಇಂತದ್ದೊಂದು ಮಹತ್ವದ ಕ್ರಮ ಜಾರಿಗೊಳ್ಳಲು ಸರ್ಕಾರ ಸಿದ್ದತೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯಲ್ಲಿ ಈಗಾಗಲೇ ಒಂದೆರಡು ಸುತ್ತಿನ ಗಂಭೀರ ಚರ್ಚೆಗಳು ನಡೆದಿದೆ.

ಹೊಸ ನಿಯಮಕ್ಕೆ ಕುರಿತಾಗಿ ಸೂಕ್ತ ನಿಯಮಾವಳಿ ರೂಪಿಸಲು ಚಿಂತನೆ ನಡೆಸಲಾಗಿದ್ದು, ನಿಯಮಗಳು ರೂಪುಗೊಂಡ ಬಳಿಕ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬೀಳಲಿದೆ ಎನ್ನಲಾಗಿದೆ.

ಹಾಗೊಂದು ವೇಳೆ ಹೊಸ ನಿಯಮ ಜಾರಿಯಾದರೆ ರಾಜ್ಯದ ಎಲ್ಲಾ ಸರ್ಕಾರಿ, ಸರ್ಕಾರೇತರ ಸಂಘ, ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಲಿದೆ. ಕನ್ನಡ ಗೊತ್ತಿಲ್ಲದ ಜನರಿಗೆ ಬ್ಯಾಂಕ್ ಕನ್ನಡ ಕಲಿಕಾ ಘಟಕ ರಚಿಸಬೇಕು. ಸರ್ಕಾರ ಬೇಕಿದ್ದರೆ ಅಗತ್ಯ ಬೋಧಕ ಅಧ್ಯಯನ ಸಾಮಗ್ರಿ ನೀಡಲಿದೆ. ಇದಕ್ಕೆ ತಗುಲುವ ವೆಚ್ಚವನ್ನು ಆಯಾ ಬ್ಯಾಂಕ್ ವಹಿಸಬೇಕು ಎಂಬ ನಿಯಮಾವಳಿ ತರಲಾಗುತ್ತಿದೆ ಎಂಬ ಮಾಹಿತಿ.

 

Comments (0)
Add Comment