ರಾಜ್ಯದ ವಿವಿಧೆಡೆ ಸೆಪ್ಟೆಂಬರ್ 12ರವರೆಗೆ ಭಾರಿ ಮಳೆ.!

 

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸೆಪ್ಟೆಂಬರ್ 12ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಬಹಳಷ್ಟು ಮಳೆಯಾಗಲಿದೆ.

ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಸೇಡಂನಲ್ಲಿ ಅತಿ ಹೆಚ್ಚು ಮಳೆಯಾಗಿದೆ, ನಿರ್ಣಾ, ಬೀದರ್, ಕೋಟ, ಚಿಂಚೋಳಿ, ಬೆಳ್ತಂಗಡಿ, ಅಡಕಿ, ಔರಾದ್, ಮುಧೋಳ, ನೆಲೋಗಿ, ಕಕ್ಕೇರಿ, ಹುಣಸಗಿ, ಕೆಂಭಾವಿ, ಮಂಠಾಳ, ಮುಡಬಿ, ಭಾಲ್ಕಿ, ಇಳಕಲ್, ಕುಡತಿನಿ, ಕಂಪ್ಲಿ, ಕುಂದಾಪುರ, ಧರ್ಮಸ್ಥಳ, ಶೋರಾಪುರ, ಸೈದಾಪುರ, ಯಡ್ರಾಮಿ, ಚಿತ್ತಾಪುರ, ಬಿಳಗಿ, ಕುಷ್ಟಗಿ, ನಲ್ವತವಾಡ, ಸಿಂದಗಿ, ತಾಳಿಕೋಟೆ, ಹುಮನಾಬಾದ್, ಮುದಗಲ್, ಗಬ್ಬೂರು, ಚಿಕ್ಕಬಳ್ಳಾಪುರ, ತೊಂಡೇಭಾವಿ, ಗೋಕರ್ಣ, ಉಪ್ಪಿನಂಗಡಿ, ಮಂಗಳೂರು, ಜೇವರ್ಗಿ,ಆಳಂದ, ಖಜೂರಿ, ಅಫಜಲ್​ಪುರ, ಗುಂಡಗುರ್ತಿ, ಕವಡಿಮಟ್ಟಿ, ಅಥಣಿ, ನಿಪ್ಪಾಣಿ, ಸಂಕೇಶ್ವರ, ನರಗುಂದ, ರೋಣ, ಕಲಬುರಗಿ, ಬಸವನ ಬಾಗೇವಾಡಿ, ಸಂಡೂರು, ಗೌರಿಬಿದನೂರು, ಚಿಂತಾಮಣಿ, ಬಳ್ಳಾರಿ, ಬೆಂಗಳೂರು, ಶಿವಮೊಗ್ಗ, ತರೀಕೆರೆಯಲ್ಲಿ ಮಳೆಯಾಗಿದೆ.

Comments (0)
Add Comment