ರಾಜ್ಯದ ಶಕ್ತಿಸೌಧ ‘ವಿಧಾನಸೌಧ’ದಲ್ಲೇ ‘ನಕಲಿ ಪಾಸ್’ಗಳ ಹಾವಳಿ

ಬೆಂಗಳೂರು: ಈವರೆಗೆ ವಿವಿಧ ಪಾಸ್ ಗಳನ್ನು ನಕಲಿ ಮಾಡುತ್ತಿದ್ದಂತ ಖದೀಮರು. ಈಗ ವಿಧಾನಸೌಧ ಪ್ರವೇಶಕ್ಕೆ ( Vidhan Soudha Entry ) ನೀಡುವಂತ ಪಾಸ್ ಗಳನ್ನು ಕೂಡ ನಕಲಿ ಮಾಡಿರೋದಾಗಿ ತಿಳಿದು ಬಂದಿದೆ. ಈ ಮೂಲಕ ರಾಜ್ಯದ ಶಕ್ತಿಸೌಧದಲ್ಲೇ ನಕಲಿ ಪಾಸ್ ಗಳ ಹಾವಳಿ ಹೆಚ್ಚಾಗಿರುವಂತ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ( Chief Minister Siddaramaiah ) ಬಜೆಟ್ ಮಂಡನೆಯ ವೇಳೆಯಲ್ಲಿ ಸದನಕ್ಕೆ ತೆರಳಿ, ಶಾಸಕರ ಸೀಟ್ ನಲ್ಲಿ ತಿಪ್ಪೇಸ್ವಾಮಿ ಎಂಬಾತ ಕುಳಿತ ಬಳಿಕ, ವಿಧಾನಸೌಧದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಿಸಿಬಿಯ ಮುಖ್ಯಸ್ಥ ಡಾ.ಶರಣಪ್ಪ ನೇತೃತ್ವದಲ್ಲಿ ಕಣ್ಗಾವಲು ನಡೆಸಲಾಗುತ್ತಿದೆ. ವಿಧಾನಸೌಧಕ್ಕೆ ಬರುವ ಪ್ರತಿಯೊಬ್ಬರನ್ನು ತಪಾಸಣೆ ಮಾಡುತ್ತಿರುವ ಕಾರಣ ಮೊನ್ನೆಯಷ್ಟೇ ಮಹಿಳೆಯರ ಬ್ಯಾಗ್ ನಲ್ಲಿ ಚಾಕು ಕೂಡ ಪತ್ತೆಯಾಗಿತ್ತು. ಚಾಕು ಜಪ್ತಿ ಮಾಡಿ, ಮಹಿಳೆಯನ್ನು ವಿಧಾನಸೌಧ ಪ್ರವೇಶಿಸಲು ನೀಡಲಾಗಿತ್ತು.

ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ 8‌ ಮದುವೆಯಾಗಿ ನಗ-ನಗದು ದೋಚಿದ ಮಹಿಳೆಗೆ ಪೊಲೀಸರ ಶೋಧ

ಇದೀಗ ವಿಧಾನಸೌಧ ಪ್ರವೇಶಿಸುವಂತ ಪ್ರತಿಯೊಬ್ಬರ ತಪಾಸಣೆ ಮಾಡುತ್ತಿರುವ ಕಾರಣ, ವಿಧಾನಸೌಧಕ್ಕೆ ಎಂಟ್ರಿಯಾಗಲು ಖತರ್ನಾಕ್ ಪ್ಲ್ಯಾನ್ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಅದೇ ನಕಲಿ ಪಾಸ್ ಗಳೊಂದಿಗೆ ( Fake Pass ) ವಿಧಾನ ಸೌಧ ಪ್ರವೇಶಿಸೋದು ಪತ್ತೆಯಾಗಿದೆ.

ಅವಧಿ ಮೀರಿದಂತ ಪಾಸ್ ಸೇರಿದಂತೆ ನಕಲಿ ಪಾಸ್ ಗಳೊಂದಿಗೆ ವಿಧಾನಸೌಧ ಪ್ರವೇಶಿಸೋದಕ್ಕೆ ಪ್ರಯತ್ನಿಸುತ್ತಿರುವುದು ಪತ್ತೆ ಹಚ್ಚಲಾಗಿದೆ. ಪ್ರವೇಶ ಪಾಸ್ ಅಲ್ಲದೇ ಕಾರಿನ ಪಾಸ್ ಗಳನ್ನು ಕೂಡ ನಕಲಿ ಮಾಡಿ, ಅವಧಿ ಮುಗಿದ್ರೂ ಪ್ರವೇಶಿಸುತ್ತಿರುವುದನ್ನು ಪತ್ತೆ ಹಚ್ಚಲಾಗಿದ್ದು, ಇವರೆಲ್ಲರಿಗೂ ಪೊಲೀಸರು ಎಚ್ಚರಿಕೆ ನೀಡದಿದ್ದಾರೆ ಎನ್ನಲಾಗಿದೆ.

Comments (0)
Add Comment