ಲೋಕಸಭಾ ಚುನಾವಣೆ: ನಾಳೆಯಿಂದ ಮೊದಲ ಹಂತ – ಯಾವ ರಾಜ್ಯಗಳಲ್ಲಿ ಮತದಾನ ನಡೆಯಲಿದೆ ಗೊತ್ತಾ?

ನವದೆಹಲಿ: ಲೋಕಸಭೆಯ ಮೊದಲ ಹಂತದ ಚುನಾವಣೆ ಇದೇ ಶುಕ್ರವಾರ ನಡೆಯಲಿದ್ದು, ಅಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಲೋಕಸಭೆ ಚುನಾವಣೆಯ ಮೊದಲ ಹಂತವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಅರುಣಾಚಲ ಪ್ರದೇಶ, ಉತ್ತರಾಖಂಡ, ಪುದುಚೇರಿ, ಲಕ್ಷದ್ವೀಪ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತಮಿಳುನಾಡು ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳನ್ನು ಒಳಗೊಂಡಿದೆ. ತ್ರಿಪುರಾದಲ್ಲಿ ಒಂದು ಸ್ಥಾನ, ಯುಪಿಯಲ್ಲಿ ಎಂಟು ಸ್ಥಾನಗಳು, ಬಂಗಾಳದಲ್ಲಿ ಮೂರು ಸ್ಥಾನಗಳಲ್ಲಿ ಚುನಾವಣೆ ನಡೆಯಲಿದೆ.

ರಾಜಸ್ಥಾನದ 12 ಸ್ಥಾನಗಳು ಮತ್ತು ಮಹಾರಾಷ್ಟ್ರದ ಐದು ಸ್ಥಾನಗಳಿಗೂ ಶುಕ್ರವಾರ ಮತದಾನ ನಡೆಯಲಿದೆ.

Comments (0)
Add Comment