ವಾಟ್ಸಾಪ್, ಫೇಸ್‌ಬುಕ್‌ ಗಿಂತಲೂ ಈ ಆ್ಯಪ್ ಜಗತ್ತಿನ ನಂಬರ್ ವನ್ – ಯಾವುದು ಆ ಆ್ಯಪ್? ಏನದರ ವಿಶೇಷತೆ?

ಈಗ ಏನಿದ್ದರೂ ಆ್ಯಪ್‌ ಗಳದ್ದೇ ಜಮಾನ. ಒಂದು ಬೇಡವಾದರೆ ನೂರು ಆಯ್ಕೆಗಳು. ಒಂದಕ್ಕೊಂದು ಭಿನ್ನ ಮತ್ತು ವಿಶಿಷ್ಟ.
ಟಿಕ್ ಟಾಕ್ ಗೆ ಭಾರತದಲ್ಲಿ ನಿಷೇಧ ಹೇರಿದ ಬಳಿಕ ಇನ್​ಸ್ಟಾಗ್ರಾಮ್ ಸಾಕಷ್ಟು ಪ್ರಸಿದ್ಧಿ ಪಡೆಯಿತು. ಅತೀ ಹೆಚ್ಚು ಡೌನ್‌ಲೋಡ್‌ ಮಾಡಿರುವ ಅಪ್ಲಿಕೇಶನ್ ಎಂಬ ಖಾತಿಯನ್ನು ಅದು ತನ್ನದಾಗಿಸಿಕೊಂಡಿತು. ರೀಲ್ ಸ್ಟೋರಿ ಗಳ ಮೂಲಕ ಇನ್‌ಸ್ಟಾಗ್ರಾಮ್ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.

ಆ್ಯಂಡ್ರಾಯ್ಡ್ ಫೋನ್ ಗಳು ಜಗತ್ತನ್ನೇ ಬದಲಿಸಿದೆ. ನಿತ್ಯದ ಎಲ್ಲ ಕೆಲಸಗಳನ್ನು ಇದು ಸುಲಭವಾಗಿಸಿದೆ. ಸ್ಮಾರ್ಟ್ ಫೋನ್ ನಲ್ಲಿ ಅಡಕವಾಗಿರುವ ಆ್ಯಪ್‌ಗಳು ಸುಲಭವಾಗಿ ಕೆಲಸ ನಿರ್ವಹಿಸಲು ಸ್ನೇಹಿತನಂತೆ ಸದಾ ಜೊತೆಯಾಗಿರುತ್ತದೆ. ಗೂಗಲ್ ಪ್ಲೇ ಸ್ಟೋರ್ ಅಥವಾ ಐಒಎಸ್ ಸ್ಟೋರ್‌ನಲ್ಲಿ ಲಕ್ಷಾಂತರ ಅಪ್ಲಿಕೇಶನ್‌ಗಳಿಂದಲೇ ಇವತ್ತು ಜಗತ್ತಿನ ಶೇ. 75ರಷ್ಟು ಕೆಲಸಗಳು ಒಂದಕ್ಕೊಂದು ಜೊತೆಯಾಗಿ ಕಾರ್ಯನಿರ್ವಹಿಸುವಂತೆ ಮಾಡಿದೆ.

ಎಲ್ಲ ಆ್ಯಪ್‌ಗಳು ಎಲ್ಲ ಫೋನ್ ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಕೆಲವು ಮಾತ್ರ ಎಲ್ಲಾ ಫೋನ್‌ಗಳಲ್ಲಿ ಇರುತ್ತವೆ. ಅವುಗಳಲ್ಲಿ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳು ಮತ್ತು ಪ್ರತೀ ಮೊಬೈಲ್‌ನಲ್ಲಿ ಹೆಚ್ಚು ಡೌನ್‌ಲೋಡ್ ಆಗುವ ಅಪ್ಲಿಕೇಶನ್‌ಗಳು ಕೆಲವು. ಅವುಗಳಲ್ಲಿ ಈ ಕೆಳಗಿನವುಗಳು ಬಲು ಪ್ರಮುಖವಾದವು.

ಟಿಕ್ ಟಾಕ್

ಭಾರತದಲ್ಲಿ ನಿಷೇಧವಾಗಿದ್ದರೂ ಸತತ ಮೂರನೇ ವರ್ಷವೂ ಟಿಕ್ ಟಾಕ್ ವಿಶ್ವದಲ್ಲಿ ಅತೀ ಹೆಚ್ಚು ಡೌನ್‌ಲೋಡ್ ಆಗಿರುವ ಆ್ಯಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್‌ಸ್ಟಾಗ್ರಾಮ್

ಟಿಕ್ ಟಾಕ್ ಬಳಿಕ ಹೆಚ್ಚು ಜನರನ್ನು ಆಕರ್ಷಿಸಿದ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್. ಇದರಲ್ಲಿನ ರೀಲು, ಸ್ಟೋರಿಗಳು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರನ್ನೂ ಸೆಳೆಯುತ್ತಿದೆ. ಮೆಟಾ ಒಡೆತನದ ಈ ಅಪ್ಲಿಕೇಶನ್ ಭಾರತದಲ್ಲಿ ಹೆಚ್ಚು ಜನರು ಉಪಯೋಗಿಸುತ್ತಿದ್ದಾರೆ.

ಫೇಸ್ ಬುಕ್

ಸಾಮಾಜಿಕ ಜಾಲತಾಣಗಳಲ್ಲಿ ಉನ್ನತ ಸ್ಥಾನ ಪಡೆದಿರುವ ಫೇಸ್‌ಬುಕ್ ಪ್ರಪಂಚದಲ್ಲೇ ಅತೀ ಹೆಚ್ಚು ಡೌನ್‌ಲೋಡ್ ಆಗಿರುವ ಆ್ಯಪ್‌ ಕೂಡ ಹೌದು.

ವಾಟ್ಸ್​ಆ್ಯಪ್

ಇವತ್ತು ವಾಟ್ಸ್​ಆ್ಯಪ್ ಪ್ರತಿಯೊಬ್ಬರೂ ಬಳಸುತ್ತಿರುವ ಆ್ಯಪ್‌. ಪ್ರಪಂಚದಾದ್ಯಂತ ಮಾಹಿತಿ ವಿನಿಮಯಕ್ಕಾಗಿ ಬಳಸಲಾಗುವ ಈ ಆ್ಯಪ್‌ನಿಂದ ಸಂದೇಶ, ಫೋಟೋ, ವಿಡಿಯೋ, ಧ್ವನಿ ಸಂದೇಶಗಳನ್ನು ಕಳುಹಿಸಬಹುದು. ಇದರಿಂದಲೇ ಹೆಚ್ಚಿನ ಜನರ ಪ್ರೀತಿ ಮತ್ತು ವಿಶ್ವಾಸವನ್ನು ಇದು ಗಳಿಸಿದೆ.

ಕ್ಯಾಪ್ ಕಟ್

ವಿಡಿಯೋ ಎಡಿಟಿಂಗ್ ಆ್ಯಪ್ ಆಗಿರುವ ಕ್ಯಾಪ್ ಕಟ್ ಅನ್ನು ಟಿಕ್ ಟಾಕ್ ಬಳಕೆದಾರರು ಹೆಚ್ಚಾಗಿ ಬಳಸುತ್ತಾರೆ. ಚಿಕ್ಕ ವಿಡಿಯೋವನ್ನು ಸುಲಭವಾಗಿ ಇದರಲ್ಲಿ ಬೇಕಾದಂತೆ ರಚಿಸಬಹುದು. ಹೀಗಾಗಿ ಬಹುತೇಕ ಎಲ್ಲಾ ಟಿಕ್ ಟಾಕ್ ಬಳಕೆದಾರರು ಕ್ಯಾಪ್ ಕಟ್ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ.

ಟೆಲಿಗ್ರಾಮ್

ಗೌಪ್ಯ ಸಂದೇಶ ಕಳುಹಿಸುವ ಅಪ್ಲಿಕೇಶನ್ ಇದಾಗಿದೆ. ಇದರ ಬಳಕೆದಾರರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದಾರೆ. ದೊಡ್ಡ ಗಾತ್ರದಲ್ಲಿ ಫೈಲ್‌ಗಳನ್ನು ಕಳುಹಿಸಲು ಇದರಲ್ಲಿ ಅನುಮತಿ ಇರುವುದರಿಂದ ಹೆಚ್ಚಿನ ಬಳಕೆದಾರರು ಇದರತ್ತ ಒಲವು ತೋರಿಸುತ್ತಿದ್ದಾರೆ.

Comments (0)
Add Comment