ವಿಶ್ವದ ದುಬಾರಿ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ನ್ಯೂಯಾರ್ಕ್

ನ್ಯೂಯಾರ್ಕ್: ಎಜುಕೇಶನಲ್ ಕ್ರೆಡೆನ್‌ಶಿಯಲ್ಸ್ ಅಸೆಸ್‌ಮೆಂಟ್ (ECA) ಸಂಸ್ಥೆಯ ಅಂತಾರಾಷ್ಟ್ರೀಯ ಜೀವನ ವೆಚ್ಚದ ಶ್ರೇಯಾಂಕಗಳ ಪ್ರಕಾರ ವಿಶ್ವದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ನ್ಯೂಯಾರ್ಕ್ ಅಗ್ರಸ್ಥಾನ ಪಡೆದುಕೊಮಡಿದೆ. ವಲಸಿಗರ ಪಾಲಿಗೆ ಈ ನಗರ ದುಬಾರಿಯಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಇನ್ನು ಈ ಪಟ್ಟಿಯಲ್ಲಿ ಹಾಂಕಾಂಗ್ ನಗರ ಎರಡನೇ ಸ್ಥಾನದಲ್ಲಿದ್ದರೆ, ಜಿನೀವಾ, ಲಂಡನ್, ಸಿಂಗಾಪುರ ಕೂಡ ಮೊದಲ ಐದು ಸ್ಥಾನಗಳಲ್ಲಿ ಇವೆ. ಜ್ಯೂರಿಚ್, ಸ್ಯಾನ್ ಫ್ರಾನ್ಸಿಸ್ಕೋ, ಟೆಲ್ ಅವಿವ್, ಸಿಯೋಲ್, ಟೋಕಿಯೊ ನಗರಗಳು ಟಾಪ್ 10 ಪಟ್ಟಿಯ ಅತ್ಯಂತ ದುಬಾರಿ ನಗರಗಳಲ್ಲಿ ಸೇರಿವೆ.

Comments (0)
Add Comment