ಸಂಗೀತಾ ಬಿಜಲಾನಿ ಜೊತೆ ಸಲ್ಲು ಮದುವೆ ಮುರಿಯಲು ಕಾರಣವೇನು ಗೊತ್ತಾ?

ಮುಂಬೈ: ಬಾಲಿವುಡ್‌ ನಟ ಸಲ್ಮಾನ್ ಖಾನ್ ಮತ್ತು ಸಂಗೀತಾ ಬಿಜಲಾನಿ ಒಂದು ಕಾಲದ ಪ್ರೇಮಪಕ್ಷಿಗಳು. ಈ ಜೋಡಿಯ ಮದುವೆ ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಮದುವೆಗೆ ಕೆಲವು ದಿನ ಬಾಕಿ ಇರೋವಾಗ ಇನ್ನೊಬ್ಬ ನಟಿ ಸೋಮಿ ಅಲಿ ಜೊತೆ ಸಲ್ಮಾನ್ ಅಪಾರ್ಟ್‌ಮೆಂಟ್‌ನಲ್ಲಿ ಸಂಗೀತ ಕಣ್ಣಿಗೆ ಬೀಳುತ್ತಾರೆ.

ಅಲ್ಲಿಂದ ಕೋಪಗೊಂಡು ಹೊರಬಂದ ಸಂಗೀತ ಮದುವೆಗೆ ಫುಲ್ ಸ್ಟಾಪ್ ಹಾಕಿ ಬಿಡ್ತಾರೆ. ಅಲ್ಲಿಂದ ಸಲ್ಮಾನ್ ಒಂಟಿಯಾಗಿ ಜೀವನ ಮುಂದುವರಿಸ್ತಾರೆ. ಇದನ್ನು ಮಾಜಿ ಪ್ರೇಮಿ ಸೋಮಿ ಅಲಿ ಹೇಳಿ ಗೋಳಾಡಿದ್ದಾರೆ. ಈ ಸುದ್ದಿ ಈಗ ಗಾಸಿಪ್ ಪ್ರಿಯರ ಚರ್ಚೆಗೆ ವೇದಿಕೆಯಾಗಿದೆ.

ಆದರೆ ಸಲ್ಮಾನ್ ಖಾನ್ ಮಾಜಿ ಪ್ರೇಯಸಿಯರು ಒಬ್ಬರ ಇಬ್ಬರಾ ಹೇಳಲು ಹೋದರೆ ಒಂದು ದಿನ ಸಾಕಾಗೋಲ್ಲ. ಆದರೆ ಸಲ್ಲು ಭಾಯ್ ಸಿಂಗಲ್ ಆಗಿರೋದಕ್ಕೆ ಈಗ ಅಸಲಿ ಕಾರಣ ಹೊರಬಿದ್ದಿದೆ.

Comments (0)
Add Comment