ಸಮೀಕ್ಷೆ ಪ್ರಕಾರ ಜಸ್ಟಿನ್ ಟ್ರುಡೋ ಉತ್ತಮ ಪ್ರಧಾನಿ ಅಭ್ಯರ್ಥಿ ಅಲ್ಲ

ಒಟ್ಟಾವಾ: ಕೆನಡಾದ ಸಂಸ್ಥೆಯೊಂದು ಮಾಡಿದ ಸಮೀಕ್ಷೆ ಪ್ರಕಾರ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ ಅವರು ಉತ್ತಮ ಪ್ರಧಾನಿ ಅಭ್ಯರ್ಥಿ ಅಲ್ಲ ಎಂಬುದು ಬಹಿರಂಗವಾಗಿದೆ. ಈ ಮೂಲಕ ಕೆನಡಾದಲ್ಲಿ ಜಸ್ಟಿನ್ ಅವರ ಜನಪ್ರಿಯತೆ ಕುಗ್ಗಿದೆ ಎಂದು ವರದಿಯಾಗಿದೆ. ಕೆನಡಾದ ಪ್ರಜೆಗಳಲ್ಲಿ ಹತ್ತರಲ್ಲಿ ನಾಲ್ವರು (40%) ಜಸ್ಟಿನ್ ಟ್ರುಡೋ ಅವರನ್ನು ನಿರಾಕರಿಸಿದ್ದಾರೆ. ಇದರಲ್ಲಿ ಬಹುತೇಕ ಜನ ಜಸ್ಟಿನ್ ಬದಲಾಗಿ ಪಿಯರೆ ಪೊಯಿಲಿವ್ರೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಇಷ್ಟಪಟ್ಟಿದ್ದಾರೆ ಎಂಬುದು ಸಮೀಕ್ಷೆ ಮೂಲಕ ಬಹಿರಂಗವಾಗಿದೆ. ಜಸ್ಟಿನ್‌ಗಿಂತ ಹೆಚ್ಚಾಗಿ ಪಿಯರೆ ಪೊಯಿಲಿವ್ರೆ ಹೆಚ್ಚು ವಿಶ್ವಾಸಾರ್ಹ ವ್ಯಕ್ತಿ ಎಂದು ಕೆನಡಾ ಜನ ಅಭಿಪ್ರಾಯ ನೀಡಿದ್ದಾರೆ ಎಂಬುದು ಸಮೀಕ್ಷೆಯಲ್ಲಿದೆ.

Comments (0)
Add Comment