ಸೈನಿಕನನ್ನು ರಕ್ಷಿಸಲು ಹೋಗಿ ಭಾರತೀಯ ಸೇನೆಯ ಕೆಂಟ್‌ ಶ್ವಾನ ಗುಂಡೇಟಿಗೆ ಬಲಿ

ಶ್ರೀನಗರ: ಉಗ್ರರು ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸೈನಿಕರನ್ನು ರಕ್ಷಿಸಲು ಹೋಗಿ ಭಾರತೀಯ ಸೇನೆಯ ಕೆಂಟ್ ಎನ್ನುವ ಶ್ವಾನ ಸಾವನ್ನಪ್ಪಿದ್ದ ಘಟನೆ ನಡೆದಿದೆ.

ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ಸೇನೆ ಶ್ವಾಮ ಕೆಂಟ್ ಮೃತಪಟ್ಟಿದೆ. 6 ವರ್ಷದ ಕೆಂಟ್ 21 ನೇ ಆರ್ಮಿ ಡಾಗ್ ಯುನಿಟ್‌ನ ಹೆಣ್ಣು ಲ್ಯಾಬ್ರಡಾರ್ ತಳಿಯದ್ದು. ನಾರ್ಲಾ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಉಗ್ರರು ಮತ್ತು ಭದ್ರತಾ ಪಡೆಗಳ ಎನ್‌ಕೌಂಟರ್ ನಡುವೆ ಗುಂಡಿನ ದಾಳಿಯಿಂದ ತನ್ನ ಜೊತೆಗಿದ್ದ ಸೈನಿಕನನ್ನು ರಕ್ಷಿಸಲು ಹೋಗಿ ಗುಂಡೇಟಿಗೆ ಬಲಿಯಾಗಿದೆ.

ಗುಂಡಿನ ಚಕಮಕಿ ನಡೆಯುವ ಮುನ್ನ ಕೆಂಟ್ ಉಗ್ರರ ಜಾಡನ್ನು ಹಿಡಿದು ಮುಂದೆ ಸಾಗುತ್ತಿತ್ತು ಈ ವೇಳೆ ಗುಂಡಿನ ದಾಳಿಯಲ್ಲಿ ಕೆಂಟ್ ಸಿಲುಕಿಕೊಂಡಿದೆ. ಕೆಂಟ್ ಗುಂಡಿನ ದಾಳಿಯಿಂದ ತನ್ನ ಜತೆಗಿದ್ದ ಹ್ಯಾಂಡ್ಲರ್ ನ ಪ್ರಾಣವನ್ನು ರಕ್ಷಿಸಿ ಗುಂಡೇಟು ತಿಂದು ಸಾವನ್ನಪ್ಪಿದೆ

ಆಪರೇಷನ್ ಸುಜಲಿಗಾಲ’ ದಲ್ಲಿ ಕೆಂಟ್ ಸೇರಿದಂತೆ ಎನ್ ಕೌಂಟರ್ ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ವಿಶೇಷ ಪೊಲೀಸ್ ಅಧಿಕಾರಿ ಸೇರಿ ಮೂವರು ಯೋಧರು ಗಾಯಗೊಂಡಿದ್ದಾರೆ.ಭದ್ರತಾ ಪಡೆಯ ಗುಂಡಿನ ಕಾಳಗದಲ್ಲಿ ಓರ್ವ ಉಗ್ರ ಹತನಾಗಿದ್ದು, ಉಳಿದ ಉಗ್ರರು ಪರಾರಿ ಆಗಿದ್ದಾರೆ ಎಂದು ವರದಿ ತಿಳಿಸಿದೆ.

Comments (0)
Add Comment