ಸೌದಿ ಅರೇಬಿಯಾ ದೊರೆ ಸಲ್ಮಾನ್ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ

ನವದೆಹಲಿ: ಇಂದು ಸೌದಿ ಅರೇಬಿಯಾ ದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಲಿದ್ದಾರೆ. ಸೌದಿ ಕ್ರೌನ್ ಪ್ರಿನ್ಸ್ ಮೂರು ದಿನಗಳ ಭೇಟಿಗಾಗಿ ದೆಹಲಿಗೆ ಆಗಮಿಸಿದ ಅವರು ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ.

ಸೌದಿ ಕ್ರೌನ್ ಪ್ರಿನ್ಸ್ ಅದೇ ಸ್ಥಳದಲ್ಲಿ ಮಧ್ಯಾಹ್ನ 12 ಗಂಟೆಗೆ ಭಾರತ-ಸೌದಿ ಸ್ಟ್ರಾಟೆಜಿಕ್ ಪಾಲುದಾರಿಕೆ ಮಂಡಳಿಯ ಮೊದಲ ಸಭೆಯ ನಡಾವಳಿಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ನಂತರ, ಸೌದಿ ಅರೇಬಿಯಾ ಪ್ರಧಾನಿ ಸಂಜೆ 6.30 ರ ಸುಮಾರಿಗೆ ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ.

ಎರಡೂ ದೇಶಗಳ ನಡುವಿನ ರಕ್ಷಣೆ, ರಾಜಕೀಯ, ಸಾಮಾಜಿಕ,ಸಾಂಸ್ಕೃತಿಕ ಸಹಕಾರಕ್ಕೆ ರಚಿಸಿರುವ ಸಮಿತಿಗಳು ಆರ್ಥಿಕ ಹಾಗೂ ಹೂಡಿಕೆಯ ಸಹಕಾರಕ್ಕೆ ರಚಿಸಿರುವ ಸಮಿತಿಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಕಾರ್ಯತಂತ್ರ ಪಾಲುದಾರಿಕೆ ಕುರಿತು ಚರ್ಚೆ ನಡೆಸಲಿದ್ದಾರೆ. ರಾತ್ರಿ 8.30 ರ ಸುಮಾರಿಗೆ ಸಲ್ಮಾನ್ ನವದೆಹಲಿಯಿಂದ ಹೊರಡಲಿದ್ದಾರೆ

Comments (0)
Add Comment