ಸ್ಲೀಪ್ ಮೋಡ್ ನಿಂದ ಎಚ್ಚರವಾಗುತ್ತಾ ವಿಕ್ರಂ, ಪ್ರಗ್ಯಾನ್?

ನವದೆಹಲಿ: ಶಶಾಂಕನ ದಕ್ಷಿಣ ದ್ರುವದಲ್ಲಿ ಇಳಿದು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ನಿದ್ರಾವಸ್ಥೆಗೆ ತೆರಳಿದ್ದ ಚಂದ್ರಯಾನ -3ರ ರೋವರ್‌ ಮತ್ತು ಲ್ಯಾಂಡರ್‌ನ್ನು ಇಸ್ರೋ ಇಂದು ಅನ್ನು ಸಕ್ರಿಯಗೊಳಿಸಲು ಪ್ರಯತ್ನಿಸಲಿದೆ.

15 ದಿನಗಳ ಚಂದ್ರನ ಹಗಲು (ಇಂದಿನಿಂದ)ಶುಕ್ರವಾರದಿಂದ ಆರಂಭವಾಗಲಿದ್ದು, ಮೊದಲ ಕಿರಣ ಬಿದ್ದ ನಂತರ ವಿಕ್ರಂ ಲ್ಯಾಂಡರ್‌ ಹಾಗೂ ಪ್ರಜ್ಞಾನ್ ರೋವರ್‌ ಜಾಗೃತಾವಸ್ಥೆಗೆ ತರುವ ಯತ್ನ ವಿಜ್ಞಾನಿಗಳು ಮಾಡಲಿದ್ದಾರೆ.

ಇಸ್ರೋ ಯೋಜಿತ ರೀತಿಯಲ್ಲಿ ರೋವರ್‌ ಮತ್ತು ಲ್ಯಾಂಡರ್‌ ಅ್ಯಕ್ಟಿವೇಟ್‌ ಆದರೆ ಚಂದ್ರನ ಮೇಲಿನ ಮಾಹಿತಿ ಸಂಗ್ರಹಿಸಿ ಮೊದಲಿನಂತೆ ಭೂಮಿಗೆ ಕಳುಹಿಸಲಿದೆ. ದಿನಗಟ್ಟಲೆ -200 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿರುವ ಲ್ಯಾಂಡರ್‌ ಮತ್ತು ರೋವರ್‌ ಸಕ್ರಿಯವಾಗದಿದ್ದರೆ ‘ಭಾರತದ ರಾಯಭಾರಿ’ಯಾಗಿ ಶಾಶ್ವತವಾಗಿ ಉಳಿಯುತ್ತವೆ. ಭವಿಷ್ಯದಲ್ಲಿ ಪುನಃ ಸಕ್ರಿಯಗೊಳಿಸುವ ಸಾಧ್ಯತೆಯಿಲ್ಲಎಂದು ವಿಜ್ಞಾನಿಗಳು ಹೇಳುತ್ತಾರೆ.

Comments (0)
Add Comment