ʼಖರ್ಜೂರʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ನಿತ್ಯ ಖರ್ಜೂರ ಸೇವನೆ ಮಾಡುವುದು ದೇಹಕ್ಕೆ ಉಷ್ಣವುಂಟು ಮಾಡುತ್ತದೆ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಅತಿಯಾಗಿ ಸೇವಿಸಿದರೆ ತೊಂದರೆಯಾಗುತ್ತದೆ ಹೊರತು ಹಿತಮಿತವಾಗಿ ಸೇವಿಸಿದರೆ ಹಲವು ರೀತಿಯ ಉಪಯೋಗಗಳಿವೆ. ಇದು ರಕ್ತ ಹೀನತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಕಣ್ಣಿನ ಸಮಸ್ಯೆ ದೂರವಾಗುತ್ತದೆ. ಇದರಲ್ಲಿ ಇರುವ ವಿಟಮಿನ್, ಪ್ರೋಟೀನ್ ರೆಟಿನಾವನ್ನು ಚೆನ್ನಾಗಿ ಇರಿಸುತ್ತದೆ.

ಆದ್ದರಿಂದ ಪ್ರತಿ ದಿನ 2 ರಿಂದ 3 ಖರ್ಜೂರ ಸೇವನೆ ಮಾಡುವುದು ಒಳ್ಳೆಯದು. ಕರುಳಿನ ಸಮಸ್ಯೆಯನ್ನು ದೂರ ಮಾಡುವ ಖರ್ಜೂರವನ್ನು ರಾತ್ರಿ ಹೊತ್ತು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಆ ನೀರನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ, ಮಲಬದ್ಧತೆಯ ಸಮಸ್ಯೆ ದೂರವಾಗುತ್ತದೆ.

ಗರ್ಭಿಣಿಯರು ನಿತ್ಯ ಒಂದು ಖರ್ಜೂರ ತಿಂದು ಹಾಲು ಕುಡಿಯುವುದರಿಂದ ರಕ್ತ ಹೀನತೆ ಸಮಸ್ಯೆ ಕಾಡುವುದಿಲ್ಲ. ಖಾಲಿ ಹೊಟ್ಟೆಗೆ ತಿನ್ನುವುದರಿಂದ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿ ಇಡುತ್ತದೆ. ಅಲ್ಲದೆ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ. ಕೂದಲು ಉದುರುವ ಸಮಸ್ಯೆಯನ್ನು ದೂರ ಮಾಡುತ್ತದೆ. ಆದ್ದರಿಂದ ನಾವು ಪ್ರತಿ ದಿನ ಬೆಳಿಗ್ಗೆ 2 ಖರ್ಜೂರ ತಿಂದು ಹಾಲು ಕುಡಿಯುವುದು ಒಳ್ಳೆಯದು.

Comments (0)
Add Comment