ಅಕ್ರಮ ಮರ ಕಡಿತ ಪ್ರಕರಣ – ಬಿಜೆಸಿ ಸಂಸದ ಪ್ರತಾಪ್ ಸಿಂಹ ಸಹೋದರನಿಗೆ ಜಾಮೀನು ಮಂಜೂರು

ಹಾಸನ : ಅರಣ್ಯ ಇಲಾಖೆಯಿಂದ ಪರ್ಮಿಶನ್ ತೆಗೆದುಕೊಳ್ಳದೆ ಅಕ್ರಮವಾಗಿ ಮರ ಕಡಿತ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹಗೆ ಜಾಮೀನು ಮಂಜೂರಾಗಿದೆ.

ನಂದಗೋಡನಹಳ್ಳಿಯಲ್ಲಿ 126ಕ್ಕೂ ಹೆಚ್ಚು ಮರ ಕಡಿದು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಹ (Pratap Simha) ಸಹೋದರ ವಿಕ್ರಂ ಸಿಂಹಗೆ ಜಾಮೀನು ನೀಡಿ ಬೇಲೂರಿನ ಸೀನಿಯರ್​ ಸಿವಿಲ್ ಜಡ್ಜ್​​ ಆದೇಶ ಹೊರಡಿಸಿದೆ. ವಿಕ್ರಂ ಪರ ವಕೀಲ ಚಂದ್ರೇಗೌಡ, ಧರ್ಮೇಗೌಡ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಹಾಸನ ‌ಜಡ್ಜ್​​​ ಮನೆಯಿಂದ ವಕೀಲರ ಜೊತೆ ವಿಕ್ರಂ ಸಿಂಹ ಹೊರಬಂದಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಕ್ರಂ ಸಿಂಹ, ‘ನನ್ನ ವಿರುದ್ಧ ಎಷ್ಟು ಪಿತೂರಿ ಮಾಡ್ತಿದ್ದಾರೆ ಎಂಬುದನ್ನ ಟೈಮ್ ಬರಲಿ ಎಲ್ಲದನ್ನೂ ಹೇಳಲುತ್ತೇನೆ. ಹೇಳಲು ತುಂಬಾ ವಿಷಯಗಳಿವೆ. ವ್ಯವಸ್ಥಿತವಾಗಿ ನನ್ನನ್ನ ಮುಗಿಸುವುದಕ್ಕಾಗಿ ಪ್ರಯತ್ನ ಮಾಡ್ತಿದ್ದಾರೆ. ನಮ್ಮ ಬ್ರದರ್​​ನ ಟಾರ್ಗೆಟ್​ ಮಾಡ್ತಿದ್ದಾರೆ, ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Comments (0)
Add Comment