ಅಜೀರ್ಣ ನಿವಾರಣೆಗೆ ಕೆಲವು ಟಿಪ್ಸ್‌ಗಳು..!

ಅಜೀರ್ಣವು ಅನೇಕ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ಸೌಮ್ಯವಾಗಿರುತ್ತದೆ. ಕೆಲವೊಮ್ಮೆ ತೀವ್ರವಾಗಿರುತ್ತದೆ.

1) ಪ್ರತಿದಿನ ಆಹಾರ ಸೇವಿಸಿದ ನಂತರ ಒಂದೊಂದು ಬಾಳೆಹಣ್ಣು ಸೇವಿಸುವುದರಿಂದ ಅಜೀರ್ಣ ದೂರವಾಗುತ್ತದೆ.

2) ಅನಾನಸ್ ಹಣ್ಣು ಸೇವನೆ ಅಜೀರ್ಣ ನಿವಾರಣೆಗೆ ಒಂದು ಮಾರ್ಗ ಅಥವಾ ಪರಿಹಾರ.

3) ಮೂಸಂಬಿ ಹಣ್ಣು ಅಜೀರ್ಣ ನಿವಾರಣೆಗೆ ಸಹಾಯಕಾರಿ. ಮೂಸಂಬಿ ಹಣ್ಣಿನಲ್ಲಿ ಜೀರ್ಣಶಕ್ತಿ ಹೆಚ್ಚಿಸುವ ಗುಣವಿದೆ, ಮಾತ್ರವಲ್ಲದೆ ಹಸಿವು ಹೆಚ್ಚಿಸುತ್ತದೆ.

4) ಬಿಳಿಯ ದ್ರಾಕ್ಷಿಯ ಹಣ್ಣು ಅಜೀರ್ಣ ನಿವಾರಣೆಗೆ ಒಂದು ಉತ್ತಮ ಮದ್ದು

5) ಪ್ರತಿದಿನ ಆಹಾರ ಸೇವಿಸಿದ ತರುವಾಯ ಒಂದು ತುಂಡು ಶುಂಠಿ ಅಗಿದು ಚಪ್ಪರಿಸುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಅದರಿಂದ ಅಜೀರ್ಣ ನಿವಾರಣೆಯಾಗುತ್ತದೆ, ಮಾತ್ರವಲ್ಲದೆ ಹೊಟ್ಟೆ ಹುಣ್ಣು ಕೂಡ ನಿವಾರಣೆ ಆಗಬಲ್ಲದು.

6) ಪ್ರತಿದಿನ ಆಹಾರ ಸೇವಿಸಿದ ನಂತರ ಪರಂಗಿ ಹಣ್ಣಿನ ಒಂದೆರಡು ತುಂಡುಗಳನ್ನು ತಿನ್ನುವುದರಿಂದಲೂ ಅಜೀರ್ಣ ನಿವಾರಣೆಯಾಗುತ್ತದೆ.

7) ಪ್ರತಿದಿನ ಆಹಾರ ಸೇವಿಸಿದ ನಂತರ ಸ್ವಲ್ಪ ಹೊತ್ತು ಗಾಳಿಗೆ ಓಡಾಡುವ ಅಭ್ಯಾಸದಿಂದ ಅಜೀರ್ಣ ಕಡಿಮೆಯಾಗುತ್ತದೆ.

Comments (0)
Add Comment