ಅತೀ ಹೆಚ್ಚು ಭಕ್ತರು ಬಂದರು ಶಬರಿಮಲೆ ಆದಾಯದಲ್ಲಿ ಕುಸಿತ

ಶಬರಿಮಲೆ : ಶಬರಿಮಲೆಯಲ್ಲಿ ಅತೀ ಹೆಚ್ಚು ಭಕ್ತರು ಆಗಮಿಸಿದ್ದು, ಶಬರಿಮಲೆಯ ಮೂಲಭೂತ ಸೌಕರ್ಯಗಳ ಅವ್ಯವಸ್ಥೆಯಿಂದಾಗಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಹೆಚ್ಚು ಭಕ್ತರು ಬಂದರೂ ಶಬರಿಮಲೆ ಆದಾಯದಲ್ಲಿ ಕುಸಿತವಾಗಿದೆ ಎಂದು ವರದಿಯಾಗಿದೆ. ಶಬರಿಮಲೆ ಯಾತ್ರೆಯ ಮಂಡಲಂ-ಮಕರವಿಳಕ್ಕು ಸಮಯದಲ್ಲಿ ಶುಕ್ರವಾರದವರೆಗಿನ ಆದಾಯದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 20 ಕೋಟಿ ರೂ.ಗಳ ಕೊರತೆಯಾಗಿದೆ.

ಶಬರಿಮಲೆಯ ತೀರ್ಥಯಾತ್ರೆಯ 28 ದಿನಗಳಲ್ಲಿ ಆದಾಯವು 134,44,90,495 ರೂಪಾಯಿಗಳನ್ನು ಮುಟ್ಟಿದೆ ಎಂದು ಟಿಡಿಬಿ ಅಧ್ಯಕ್ಷ ಪಿ ಎಸ್ ಪ್ರಶಾಂತ್ ಶುಕ್ರವಾರ ತಿಳಿಸಿದ್ದಾರೆ. ಕಳೆದ ಬಾರಿ ಇಲ್ಲಿಯವರೆಗೆ 154,77,97,005 ರೂ. ಹಾಗಾಗಿ 20,33,06,510 ರೂ. ಇಳಿಕೆಯಾಗಿದೆ. ಬೆಟ್ಟದ ದೇಗುಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದು ಕುಸಿತಕ್ಕೆ ಪ್ರಮುಖ ಕಾರಣ ಎಂದು ಪ್ರಶಾಂತ್ TNIE ಗೆ ತಿಳಿಸಿದ್ದಾರೆ.

“ಕಳೆದ ವರ್ಷ, ಬೆಟ್ಟದ ದೇಗುಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಇತ್ತು, ಅಲ್ಲದೆ ಕರ್ನಾಟಕ ಮತ್ತು ತೆಲಂಗಾಣದಂತಹ ರಾಜ್ಯಗಳ ಭಕ್ತರು ತಮ್ಮ ದಿನನಿತ್ಯದ ಆದಾಯದ ಒಂದು ಭಾಗವನ್ನು ಉಳಿಸಿ ಅಯ್ಯಪ್ಪ ದೇವರಿಗೆ ಅರ್ಪಿಸುತ್ತಾರೆ.ಹೀಗಾಗಿ ಹೆಚ್ಚಿನ ಆದಾಯ ಬಂದಿತ್ತು ಎಂದು ತಿಳಿಸಿದ್ದಾರೆ. ಆದರೆ ಭಕ್ತರ ಪ್ರಕಾರ ಕೇರಳ ಸರಕಾರ ಶಬರಿಮಲೆ ಭಕ್ತರ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದ್ದು, 18 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತರೂ ಅಯ್ಯಪ್ಪನ ದರ್ಶನ ವಾಗದೇ ಭಕ್ತರು ಹಿಂತಿರುಗಿದ್ದಾರೆ. ಇದು ಶಬರಿಮಲೆಯಲ್ಲಿ ಆದಾಯ ಕುಸಿಯಲು ಮೂಲ ಕಾರಣ ಎಂದು ಹೇಳಲಾಗಿದೆ.

ಆದರೆ ಅಧಿಕಾರಿಗಳು ಮಾತ್ರ ಆದಾಯವು ಶೀಘ್ರದಲ್ಲೇ ಹೆಚ್ಚಾಗುವ ಸಾದ್ಯತೆ ಇದೆ ಎಂದು ಆಶಾ ಭಾವನೆಯಲ್ಲಿದ್ದಾರೆ. ಮೊದಲ ಎರಡರಿಂದ ಮೂರು ವಾರಗಳಲ್ಲಿ ಯಾತ್ರಾರ್ಥಿಗಳ ಆಗಮನ ಕಡಿಮೆಯಾದ ಕಾರಣ ‘ಅಪ್ಪಂ ಮತ್ತು ಅರವಣ’ ಮಾರಾಟವೂ ಕಡಿಮೆಯಾಗಿದೆ. ಆ ದಿನಗಳಲ್ಲಿ ‘ಅರವಣ’ದ ದೈನಂದಿನ ಮಾರಾಟ 2.25 ಲಕ್ಷ ಟಿನ್‌ಗಳಷ್ಟಿತ್ತು. ಆದರೆ, ಡಿಸೆಂಬರ್ 12ರಂದು ‘ಅರವಣ ಟಿನ್’ಗಳ ಮಾರಾಟ 4.25 ಲಕ್ಷ ಟಿನ್ ಆಗಿತ್ತು. ಕಳೆದ ಕೆಲವು ದಿನಗಳಿಂದ ದಿನಕ್ಕೆ ಸರಾಸರಿ 3.25 ಲಕ್ಷ ‘ಅರವಣ ಟಿನ್’ಗಳು ಮಾರಾಟವಾಗುತ್ತಿದ್ದವು. ಯಾತ್ರೆಯ ಸಂದರ್ಭದಲ್ಲಿ ಗುರುವಾರ ಮಧ್ಯರಾತ್ರಿಯವರೆಗೆ 18,16,588 ಯಾತ್ರಾರ್ಥಿಗಳು ಬೆಟ್ಟದ ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿ ಅಜಿತ್ ತಿಳಿಸಿದ್ದಾರೆ.

Comments (0)
Add Comment