ಅಬಕಾರಿ ಇಲಾಖೆ ಮಿಂಚಿನ ಕಾರ್ಯಾಚರಣೆ: ರೂ.1.29 ಕೋಟಿ ಮೌಲ್ಯದ ಮದ್ಯ ವಶ.!

 

ಚಿತ್ರದುರ್ಗ : ಸಾರ್ವತ್ರಿಕ ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಯಿಂದ ಹೆಚ್ಚಿನ ಕಾರ್ಯಾಚರಣೆ ನಡೆಸಿ ಜಿಲ್ಲೆಯಾದ್ಯಂತ ರೂ.1.29 ಕೋಟಿ ರೂಪಾಯಿಗಳ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಮದ್ಯ ಮಾರಾಟ, ಸಾಗಾಣಿಕೆ ಹಾಗೂ ಮದ್ಯ ಹಂಚುವುದನ್ನು ತಡೆಯಲು ಅಬಕಾರಿ ಇಲಾಖೆಯಿಂದ ಜಿಲ್ಲೆಯಾದ್ಯಂತ 9 ತಂಡ ರಚನೆ ಮಾಡಲಾಗಿದೆ.  ಇದರೊಂದಿಗೆ ಗಡಿ ರಾಜ್ಯ ಆಂಧ್ರಪ್ರದೇಶಕ್ಕೆ ಹೊಂದಿಕೊAಡಿರುವ ಜಿಲ್ಲೆಯ ಅಂತರಾಜ್ಯ ಗಡಿ ಪ್ರದೇಶಗಳಾದ ಹಿರಿಯೂರು ತಾಲ್ಲೂಕು ಮದ್ದಿಹಳ್ಳಿ, ಚಳ್ಳಕೆರೆ ತಾಲ್ಲೂಕಿನ ದೊಡ್ಡಬಾದಿಹಳ್ಳಿ, ಮೊಳಕಾಲ್ಮೂರು ತಾಲ್ಲೂಕಿನ ಎದ್ದುಲಬೊಮ್ಮನಹಟ್ಟಿಯಲ್ಲಿ 3 ಅಬಕಾರಿ ತನಿಖಾ ತಂಡಗಳನ್ನು ರಚಿಸಿ ಕಾರ್ಯನಿರ್ವಹಿಸಲಾಗುತ್ತಿದೆ.

ಮಾ. 16 ರಿಂದ ಏ.2 ರವರೆಗೆ ಜಿಲ್ಲೆಯಲ್ಲಿ 27 ಘೋರ ಪ್ರಕರಣಗಳು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಿದ ಆರೋಪದಡಿಯಲ್ಲಿ 227 ಪ್ರಕರಣಗಳು, ಜಿಲ್ಲೆಯ ವಿವಿಧ ಬಗೆಯ ಮದ್ಯದಂಗಡಿಯಲ್ಲಿ ಸನ್ನದು, ಷರತ್ತುಗಳ ಉಲ್ಲಂಘನೆಗಾಗಿ 22 ಪ್ರಕರಣಗಳು ದಾಖಲಿಸಲಾಗಿದೆ.  ಈ ಎಲ್ಲಾ ಪ್ರಕರಣಗಳಿಮದ 258 ಆರೋಪಿಗಳನ್ನು ದಸ್ತಗಿರಿಗೊಳಿಸಲಾಗಿದೆ. 22,452 ಲೀಟರ್ ಮದ್ಯ, 25 ಲೀಟರ್ ಬೀಯರ್, 6 ಲೀಟರ್ ಸೇಂದಿಯನ್ನು ಹಾಗೂ ಮದ್ಯ ಸಾಗಾಣಿಕೆಗಾಗಿ ಬಳಸಲಾದ 22 ದ್ವಿಚಕ್ರ ಮತ್ತು 1 ನಾಲ್ಕು ಚಕ್ರದದ ವಾಹನವನ್ನು ಜಪ್ತಿ ಮಾಡಲಾಗಿದೆ.  ಅಕ್ರಮ ಮದ್ಯ ದಾಸ್ತಾನು ಸಂಗ್ರಹಣೆ, ಸಾಗಾಣಿಕೆ, ಮಾರಾಟ ವಿತರಣೆ ಮುಂತಾದ ಚುನಾವಣಾ ಅಬಕಾರಿ ಅಕ್ರಮಗಳು ಕಂಡು ಬಂದಲ್ಲಿ ಅಬಕಾರಿ ಇಲಾಖೆಯ ಟೋಲ್ ಫ್ರೀ ನಂಬರ್ 18004253521 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು  ಅಬಕಾರಿ ಉಪ ಆಯುಕ್ತ ಡಾ.ಬಿ. ಮಾದೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಬಕಾರಿ ಇಲಾಖೆ ಮಿಂಚಿನ ಕಾರ್ಯಾಚರಣೆ: ರೂ.1.29 ಕೋಟಿ ಮೌಲ್ಯದ ಮದ್ಯ ವಶ.!
Comments (0)
Add Comment