ಅಭಿಮಾನಿ ಬೆನ್ನ ಮೇಲೆ ನಟಿ ರಚಿತಾ ರಾಮ್ ಟ್ಯಾಟೋ – ಪೋಟೊ ವೈರಲ್

ಬೆಂಗಳೂರು: ನಟಿ ರಚಿತಾ ರಾಮ್ ಅವರ ಅಭಿಮಾನಿಯೊಬ್ಬರು ನಟಿಯ ಪೋಟೊವನ್ನು ಬೆನ್ನ ಮೇಲೆ ಟ್ಯಾಟೋ ಹಾಕಿಸಿಕೊಂಡು ನಮ್ಮನೆ ದೇವರು ಎಂದು ಬರೆಯಿಸಿಕೊಂಡಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಅನೇಕ ಅಭಿಮಾನಿಗಳ ಸಂಘವೇ ಇದ್ದು ಅದರಲ್ಲಿ ಒಬ್ಬ ಅಭಿಮಾನಿ ಬೆನ್ನ ಮೇಲೆ ಟ್ಯಾಟೋ ಹಾಕಿಸಿಕೊಂಡು ನಮ್ಮನೆ ದೇವರು ಎಂದು ಬರೆಯಿಸಿಕೊಂಡಿದ್ದಾರೆ.

ಇನ್ನು ಈ ಹಿಂದೆ ಟ್ಯಾಟೋ ಹಾಕಿಸಿಕೊಳ್ಳಬೇಡಿ ಎಂದು ಅನೇಕ ಕಲಾವಿದರು ಹೇಳಿದ್ದರು. ಆದರೆ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಪೋಟೊಗಳನ್ನು ಟ್ಯಾಟೋ ಹಾಕಿಸಿಕೊಳ್ಳುತ್ತಿರುವುದನ್ನು ನಾವು ಗಮನಿಸಬಹುದು.

Comments (0)
Add Comment