ಅಮೆರಿಕಕ್ಕೆ ಅಕ್ರಮವಾಗಿ ಕೆನಡಾದಿಂದ ಪ್ರವೇಶ- ಮೂವರು ಭಾರತೀಯರ ಸಹಿತ ನಾಲ್ವರ ಬಂಧನ

ಅಮೆರಿಕಕ್ಕೆ ಅಕ್ರಮವಾಗಿ ಕೆನಡಾದಿಂದ ಪ್ರವೇ ಶಿಸಲು ಯತ್ನಿಸುತ್ತಿದ್ದ ಮೂವರು ಭಾರತೀಯರು ಸೇರಿದಂತೆ 4 ಮಂದಿಯನ್ನು ನ್ಯೂಯಾರ್ಕ್ ಗಡಿಯಲ್ಲಿ ಬಂಧಿಸಲಾಗಿದೆ. ಬಫೆಲೊ ನಗರದ ಬಳಿ ಚಲಿಸುತ್ತಿದ್ದ ರೈಲಿನಿಂದ ಅಂತರರಾಷ್ಟ್ರೀಯ ಗಡಿಗೆ ಧುಮುಕಿದ ಒಬ್ಬ ಮಹಿಳೆ ಸೇರಿ ನಾಲ್ವರನ್ನು ಅಮೆರಿಕ ಗಡಿ ಭದ್ರತಾ ಪಡೆ ಬಂಧಿಸಿದೆ. ನಾಲವರ ಪೈಕಿ ಒಬ್ಬ ವ್ಯಕ್ತಿ ಡೊಮಿನಿಕ್ ರಿಪಬ್ಲಿಕ್‌ ಮೂಲದವನು ಎಂದು ಗೊತ್ತಾಗಿದೆ. ರೈಲಿನಿಂದ ಧುಮುಕಿ ಗಾಯಗೊಂಡಿದ್ದ ಮಹಿಳೆ ನಡೆಯಲು ಸಾಧ್ಯವಾಗದ್ದರಿಂದ ಆಕೆಯನ್ನು ಬಿಟ್ಟು ತೆರಳಲಾಗಿತ್ತು. ಪೊಲಿಸರು ಆಕೆಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ವಲ್ಪ ಸಮಯದಲ್ಲೇ ಉಳಿದ ಮೂವರನ್ನೂ ಬಂಧಿಸಿದ್ದಾರೆ. ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿ ಸ್ಥಳೀ ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರಣೆ ವೇಳೆ ಈ ನಾಲ್ವರೂ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ್ದು ದೃಢಪಟ್ಟಿದೆ.ಉಳಿದ ಮೂವರನ್ನು ವಲಸೆ ಮತ್ತು ರಾಷ್ಟ್ರೀ ಯತೆ ಕಾಯ್ದೆಯ ಸೆಕ್ಷನ್ 212 ಹಾಗೂ 237ರಡಿ ಗಡಿಪಾರು ಮಾಡಲು ಪೊಲೀಸರು ಮುಂದಾಗಿದ್ದಾರೆ.

Comments (0)
Add Comment