ಅಮೆರಿಕದಲ್ಲಿ 22 ಜನರ ಹತ್ಯೆ .! ಶೂಟರ್‌ನ ಫೋಟೋ ರಿಲೀಸ್

ವಾಷಿಂಗ್ಟನ್: ಅಮೆರಿಕದ ಮೈನ್‌ನ ಲೆವಿಸ್ಟನ್‌ನಲ್ಲಿ ಬುಧವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪಿದ್ದು, ಸುಮಾರು 60 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ‌. ಈ‌ ಕ್ರೌರ್ಯವು ಲೆವಿಸ್ಟನ್‌ನ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಗುಂಡಿನ ದಾಳಿಗೆ ಕಾರಣವೇನು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಸಂಬಂಧ ಪೊಲೀಸರು ಫೇಸ್‌ಬುಕ್‌ನಲ್ಲಿ ಶಂಕಿತ ವ್ಯಕ್ತಿಯ ಎರಡು ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ, “ದಯವಿಟ್ಟು ನಿಮ್ಮ ಮನೆಯೊಳಗೆ ಬಾಗಿಲು ಹಾಕಿಕೊಂಡು ಇರಿ. ಕಾನೂನು ಜಾರಿ ಅಧಿಕಾರಿಗಳು ಪ್ರಸ್ತುತ ಹಲವು ಸ್ಥಳಗಳಲ್ಲಿ ತನಿಖೆ ನಡೆಸುತ್ತಿದ್ದಾರೆ” ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

Comments (0)
Add Comment