ಅಮೇರಿಕಾದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಪತ್ನಿ ವಿಧಿವಶ

ವಾಷಿಂಗ್ಟನ್: ಅಮೇರಿಕಾದ ಮಾಜಿ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್‍ ಅವರ ಪತ್ನಿ ರೋಸಲಿನ್ ಕಾರ್ಟರ್(96) ವಿಧಿವಶರಾಗಿದ್ದಾರೆ.ಅಮೇರಿಕಾದ ಮಾಜಿ ಪ್ರಥಮ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಅವರು ಮಾನಸಿಕ ಆರೋಗ್ಯ ಕಾರ್ಯಕರ್ತೆಯಾಗಿಯೂ ಕಾರ್ಯ ನಿರ್ವಹಿಸಿದ್ದರು ಎಂದು ಕಾರ್ಟರ್ ಸೆಂಟರ್ ತಿಳಿಸಿದೆ.

ಇನ್ನು ಪತ್ನಿಯ ಸಾವಿನ ಕುರಿತು ಜಿಮ್ಮಿ ಕಾರ್ಟರ್ ಪ್ರತಿಕ್ರಿಯೆ ನೀಡಿದ್ದು “ನಾನು ಸಾಧಿಸಿದ ಎಲ್ಲದರಲ್ಲೂ ರೊಸಾಲಿನ್ ನನ್ನ ಸಮಾನ ಪಾಲುದಾರರಾಗಿದ್ದರು” ಎಂದು ಹೇಳಿದ್ದಾರೆ. ಇನ್ನು ಈ ದಂಪತಿ ಕಳೆದ ಜುಲೈನಲ್ಲಿ ತಮ್ಮ 77 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

 

Comments (0)
Add Comment