ಅಯೋಧ್ಯೆಯಲ್ಲಿ ‘ಅಕ್ಷತಾ ಪೂಜೆ’: ದೇಶಾದ್ಯಂತ ಮನೆ ಮನೆಗೆ ತಲುಪಲಿದೆ ಶ್ರೀರಾಮನ ಅಕ್ಷತೆ..!

ಶ್ರೀರಾಮನ ಅಕ್ಷತೆ..! 100 ಕ್ವಿಂಟಲ್ ಅಕ್ಕಿಗೆ ಅರಿಶಿನ ಹಾಗೂ ದೇಸೀ ಹಸುವಿನ ತುಪ್ಪ ಬೆರೆಸಿದ ಅಕ್ಷತೆಯನ್ನು ಅಯೋಧ್ಯೆಯ ಶ್ರೀರಾಮ ಮಂದಿರದ ರಾಮ ದರ್ಬಾರ್ ಸ್ಥಳದಲ್ಲಿ ಆರ್‌ಎಸ್‌ಎಸ್ ಹಾಗೂ ವಿಎಚ್‌ಪಿ ಕಾರ್ಯಕರ್ತರಿಗೆ ಹಿತ್ತಾಳೆ ಹರಿವಾಣದಲ್ಲಿ ತುಂಬಿ ನೀಡಲಾಗಿದೆ. ಈ ಅಕ್ಷತೆಯನ್ನು ಕಾರ್ಯಕರ್ತರು ದೇಶಾದ್ಯಂತ ಪ್ರತಿ ಹಳ್ಳಿಗೂ, ಪ್ರತಿ ಮನೆಗೂ ತಲುಪಿಸುವ ಜವಾಬ್ದಾರಿ ಹೊತ್ತಿದ್ದಾರೆ. ಭಗವಾನ್ ಶ್ರೀರಾಮ ಮಂದಿರದ ಕುರಿತಾದ ಕರಪತ್ರದ ಜೊತೆ ಅಕ್ಷತೆ ಪ್ರತಿ ಮನೆಯನ್ನೂ ತಲುಪಲಿದೆ. ವಿಶ್ವ ಹಿಂದೂ ಪರಿಷತ್‌, ಆರ್‌ಎಸ್‌ಎಸ್ ಪದಾಧಿಕಾರಿಗಳಿಗೆ ಅಕ್ಷತೆ ವಿತರಣೆ ಜನವರಿ 22ರ ಒಳಗೆ ದೇಶಾದ್ಯಂತ ಅಕ್ಷತೆ ತಲುಪಿಸುವ ಜವಾಬ್ದಾರಿ ಎಲ್ಲರಿಗೂ ಹಿತ್ತಾಳೆಯ ಹರಿವಾಣದಲ್ಲಿ ಅಕ್ಷತೆಯನ್ನು ತುಂಬಿ ನೀಡಲಾಗಿದೆ ಅಯೋಧ್ಯೆಯಲ್ಲಿ ‘ಅಕ್ಷತಾ ಪೂಜೆ’: ದೇಶಾದ್ಯಂತ ಮನೆ ಮನೆಗೆ ತಲುಪಲಿದೆ ಶ್ರೀರಾಮನ ಅಕ್ಷತೆ! ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯ ಭಗವಾನ್ ಶ್ರೀರಾಮ ಜನ್ಮ ಭೂಮಿ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆಯಲಿದ್ದು, ಇದರ ಪೂರ್ವಾಭಾವಿಯಾಗಿ ಧಾರ್ಮಿಕ ವಿಧಿ ವಿಧಾನಗಳು ನವೆಂಬರ್ 5 ಭಾನುವಾರದಿಂದಲೇ ಶುಭಾರಂಭಗೊಂಡಿದೆ. ಈಗಾಗಲೇ ಬಹುಪಾಲು ನಿರ್ಮಾಣಗೊಂಡಿರುವ ರಾಮ ಮಂದಿರದಲ್ಲಿ ಭಾನುವಾರ ಬೆಳಗ್ಗೆ ‘ಅಕ್ಷತಾ ಪೂಜೆ’ ನಡೆಯಿತು. ಶ್ರೀರಾಮ ಮಂದಿರದ ಪವಿತ್ರೀಕರಣಕ್ಕಾಗಿ ನಡೆಸುವ ವಿಧಿ ವಿಧಾನ ಇದಾಗಿದೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಧಾರ್ಮಿಕ ಮುಖಂಡರು ಹೇಳಿದ್ದಾರೆ. ಅಯೋಧ್ಯಾ ರಾಮಮಂದಿರದ ಗರ್ಭಗೃಹಕ್ಕೆ ರಾಮಲಲ್ಲಾ ಮೂರ್ತಿ ಹೊತ್ತು ತರಲಿದ್ದಾರೆ ಪ್ರಧಾನಿ ಮೋದಿ! ರಾಮ ಮಂದಿರದಲ್ಲಿ ನಿರ್ಮಿಲಾಗಿರುವ ‘ರಾಮ ದರ್ಬಾರ್’ ಎನ್ನುವ ಸ್ಥಳದಲ್ಲಿ ಈ ಅಕ್ಷತಾ ಪೂಜೆ ನಡೆಯಿತು. ರಾಮ ದರ್ಬಾರ್‌ ಅನ್ನು ಭಗವಾನ್ ಶ್ರೀರಾಮನ ನ್ಯಾಯಾಲಯ ಎನ್ನಲಾಗುತ್ತದೆ. ಈ ಧಾರ್ಮಿಕ ವಿಧಿ ವಿಧಾನ ನೆರವೇರಿಸಲು 100 ಕ್ವಿಂಟಲ್ ಅಕ್ಕಿ ಬಳಕೆ ಮಾಡಲಾಗಿತ್ತು. ಅಕ್ಕಿಗೆ ದೇಸಿ ಹಸುವಿನ ತುಪ್ಪ ಹಾಗೂ ಅರಿಶಿನ ಬೆರೆಸಿ ಅಕ್ಷತೆ ತಯಾರಿಸಲಾಗಿತ್ತು ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ವಿವರಿಸಿದೆ. ಅಯೋಧ್ಯಾದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ, ಮೂರ್ತಿ ಹೊತ್ತು ಕಾಲ್ನಡಿಗೆಯಲ್ಲಿ ಬರಲಿರುವ ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್‌ನ ಹಲವು ಹುದ್ದೆಗಳಲ್ಲಿ ಇರುವ 90 ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಪದಾಧಿಕಾರಿಗಳಿಗೆ ಅಕ್ಷತೆ ನೀಡಲಾಯ್ತು. ದೇಶಾದ್ಯಂತ ಇರುವ ವಿಶ್ವ ಹಿಂದೂ ಪರಿಷತ್‌ನ 45 ವಿವಿಧ ವಿಭಾಗಗಳ ಮುಖ್ಯಸ್ಥರನ್ನು ಅಕ್ಷತಾ ಪೂಜೆಗೆ ಆಹ್ವಾನ ನೀಡಲಾಗಿತ್ತು. 8 ಅಡಿ ಎತ್ತರದ ಚಿನ್ನ ಲೇಪಿತ ಅಮೃತಶಿಲೆ ಸಿಂಹಾಸನದ ಮೇಲೆ ‘ರಾಮ ಲಲ್ಲಾ’ ವಿರಾಜಮಾನ! ವಿಶ್ವ ಹಿಂದೂ ಪರಿಷತ್‌ನ ಈ 90 ಪದಾಧಿಕಾರಿಗಳು ತಮಗೆ ನೀಡಿರುವ ಅಕ್ಷತೆಯನ್ನು ದೇಶಾದ್ಯಂತ ತಲುಪಿಸಲಿದ್ದಾರೆ. ಜನವರಿ 22ರ ಒಳಗೆ ಅಂದರೆ, ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗುಡಿ ಒಳಗೆ ರಾಮ ಲಲ್ಲಾ (ಬಾಲ ರಾಮ) ಮೂರ್ತಿ ಪ್ರತಿಷ್ಠಾಪನೆ ಆಗುವುದರ ಒಳಗಾಗಿ ಈ ಪದಾಧಿಕಾರಿಗಳು ಅಕ್ಷತಾ ಪೂಜೆಯಲ್ಲಿ ನೀಡಲಾದ ಅಕ್ಷತೆಯನ್ನು ದೇಶಾದ್ಯಂತ ತಲುಪಿಸುವ ಜವಾಬ್ದಾರಿ ಹೊತ್ತಿದ್ದಾರೆ ಎಂದು ಅಯೋಧ್ಯಾ ಶ್ರೀರಾಮ ಜನ್ಮ ಭೂಮಿ ಟ್ರಸ್ಟ್‌ ಹೇಳಿದೆ. ಇದಲ್ಲದೆ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೂ ಅಕ್ಷತೆ ನೀಡಲಾಗಿದ್ದು, ಒಟ್ಟು 200 ಮಂದಿಗೆ ಅಕ್ಷತೆ ಸಿಕ್ಕಿದೆ ಎಂಬ ಮಾಹಿತಿ ಇದೆ. ಎಲ್ಲರಿಗೂ ಹಿತ್ತಾಳೆಯ ಹರಿವಾಣದಲ್ಲಿ ಅಕ್ಷತೆಯನ್ನು ತುಂಬಿ ನೀಡಲಾಗಿದೆ. ಅಕ್ಷತೆ ವಿತರಣೆ ಮಾಡುವ ವೇಳೆ 100 ಕ್ವಿಂಟಲ್ ಜೊತೆಗೆ ಇನ್ನಷ್ಟು ಅಕ್ಕಿಯನ್ನೂ ಸೇರಿಸಲಾಗಿದೆ ಎಂಬ ಮಾಹಿತಿ ಇದೆ. ಆರ್‌ಎಸ್‌ಎಸ್ ಹಾಗೂ ವಿಎಚ್‌ಪಿ ಕಾರ್ಯಕರ್ತರು ಈ ಅಕ್ಷತೆಯನ್ನು ದೇಶಾದ್ಯಂತ ತಲುಪಿಸಲಿದ್ದಾರೆ. ದೇಶಾದ್ಯಂತ ಒಟ್ಟು 5 ಲಕ್ಷ ಗ್ರಾಮಗಳಿಗೆ ಈ ಅಕ್ಷತೆ ತಲುಪಲಿದೆ. ಅಕ್ಷತೆಯ ಮೂಲಕ ದೇಶಾದ್ಯಂತ ನಗರ ಹಾಗೂ ಗ್ರಾಮಗಳಲ್ಲಿ ಭಗವಾನ್ ಶ್ರೀರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ಸ್ಥಾಪನೆಯ ಸುದ್ದಿ ಹರಡೋದು ಈ ಕಾರ್ಯಕ್ರಮದ ಸದುದ್ದೇಶವಾಗಿದೆ. ಇದಲ್ಲದೆ ದೇಶಾದ್ಯಂತ ಎಲ್ಲಾ ಪ್ರಾದೇಶಕ ಭಾಷೆಗಳಲ್ಲಿ ಸುಮಾರು 2 ಕೋಟಿ ಕರಪತ್ರಗಳನ್ನು ಮುದ್ರಿಸಿ ಜನರಿಗೆ ಹಂಚಲು ತೀರ್ಮಾನಿಸಲಾಗಿದೆ. ಅಕ್ಷತೆ ಜೊತೆಗೆ ಈ ಕರಪತ್ರವನ್ನು ದೇಶಾದ್ಯಂತ ಪ್ರತಿ ಮನೆಗೂ ತಲುಪಿಸಲು ನಿರ್ಧರಿಸಲಾಗಿದೆ

Comments (0)
Add Comment