ಅಯೋಧ್ಯೆ ರೈಲ್ವೆ ನಿಲ್ದಾಣಕ್ಕೆ ‘ಅಯೋಧ್ಯಾ ಧಾಮ್’ ಎಂದು ಮರುನಾಮಕರಣ

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆ ರೈಲ್ವೆ ಜಂಕ್ಷನ್ ಅನ್ನು “ಅಯೋಧ್ಯಾ ಧಾಮ್ ಜಂಕ್ಷನ್” ಎಂದು ಮರುನಾಮಕರಣ ಮಾಡಲಾಗಿದೆ.

“ಇದೇ ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿರುವ ಅಯೋಧ್ಯೆ ರೈಲು ನಿಲ್ದಾಣವನ್ನು ‘ಅಯೋಧ್ಯಾ ಧಾಮ್’ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ” ಎಂದು ನಗರದ ಬಿಜೆಪಿ ಸಂಸದ ಲಲ್ಲು ಸಿಂಗ್ ಮಾಹಿತಿ ನೀಡಿದ್ದಾರೆ

ಜನವರಿ 22 ರಂದು ರಾಮಮಂದಿರ್ ಉದ್ಘಾಟನೆಗೂ ಮುನ್ನ ಅಯೋಧ್ಯೆ ರೈಲು ನಿಲ್ದಾಣದ ಹೆಸರನ್ನು ಮರುನಾಮಕರಣ ಮಾಡಲಾಗಿದೆ ಎಂದು ಲಲ್ಲು ಸಿಂಗ್ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮಾರ್ಗದರ್ಶನದಲ್ಲಿ “ಅಯೋಧ್ಯಾ ಜಂಕ್ಷನ್ “ಅಯೋಧ್ಯಾ ಧಾಮ” ಜಂಕ್ಷನ್ ಆಗಿ ಮಾರ್ಪಟ್ಟಿದೆ, ಹೊಸದಾಗಿ ನಿರ್ಮಿಸಲಾದ ಭವ್ಯವಾದ ಅಯೋಧ್ಯೆ ರೈಲು ನಿಲ್ದಾಣದ ಅಯೋಧ್ಯೆ ಜಂಕ್ಷನ್ ಹೆಸರನ್ನು ಸಾರ್ವಜನಿಕರ ನಿರೀಕ್ಷೆಯಂತೆ ಅಯೋಧ್ಯಾ ಧಾಮ ಜಂಕ್ಷನ್ ಎಂದು ಬದಲಾಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Comments (0)
Add Comment