ಅರ್ಜುನನ ಸಾವಿನಿಂದ ಸ್ಥಗಿತಗೊಂಡ ಕಾಡಾನೆ ಸೆರೆ ನಾಳೆಯಿಂದ ಪುನರಾರಂಭ

ಹಾಸನ: ಅರ್ಜುನನ ಸಾವಿನಿಂದ ಸ್ಥಗಿತಗೊಂಡಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ನಾಳೆಯಿಂದ ಮತ್ತೆ ಆರಂಭವಾಗಲಿದೆ.

ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಅರಣ್ಯ ವಲಯದಲ್ಲಿ ಕಾಡಾನೆ ಸೆರೆ ಕಾರ್ಯಾಚಣೆ ನವೆಂಬರ್23 ರಿಂದ ಆರಂಭವಾಗಿತ್ತು. ಆದರೆ ಡಿ. 4ರಂದು ಕಾಡಾನೆ ನಡೆಸಿದ ದಾಳಿ ಪರಿಣಾಮ ಅರ್ಜುನನ ಸಾವನ್ನಪ್ಪಿ ಸ್ಥಗಿತಗೊಂಡಿತ್ತು.ಅರ್ಜುನನ ಸಾವಿಗೆ ಕೋಟ್ಯಂತರ ಜನರು ಮರುಕ ವ್ಯಕ್ತಪಡಿಸಿದ್ದರು.

ಇದೀಗ ಮತ್ತೆ ಕಾರ್ಯಾಚರಣೆ ಪುನರಾರಂಭಗೊಂಡಿದ್ದು, ಬೇಲೂರು ಭಾಗದಲ್ಲಿ ಕಾಡಾನೆ ಕಾರ್ಯಾಚರಣೆ ನಡೆಯಲಿದೆ. ಈಗಾಗಲೇ ಬೇಲೂರು ತಾಲೂಕಿನ ಬಿಕ್ಕೋಡು ಆನೆ ಕ್ಯಾಂಪ್‌ಗೆ ಸಾಕಾನೆಗಳಾದ ಹರ್ಷ, ಸುಗ್ರೀವ, ಧನಂಜಯ, ಅಶ್ವತ್ಥಾಮ, ಪ್ರಶಾಂತ ಆಗಮಿಸಿದ್ದು, ನಾಳೆ ಕರ್ನಾಟಕ ಭೀಮ, ಅಭಿಮನ್ಯು ಸೇರಿ ಇನ್ನೂ ಕೆಲವು ಸಾಕಾನೆಗಳು ಬರುವ ನಿರೀಕ್ಷೆಯಿದೆ. ಈ ಬಾರಿ 10 ಸಾಕಾನೆಗಳ ಮೂಲಕ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಲಿದೆ.

ಅರ್ಜುನನನ್ನು ಕೊಂದ ಕಾಡಾನೆ ಹಿಡಿದೆಹಿಡಿಯುತ್ತೇವೆ ಎಂದು ಮಾವುತರು ಶಪಥ ಮಾಡಿದ್ದರು. ಆ ನಿಟ್ಟಿನಲ್ಲಿ ಅಭಿಮನ್ಯು ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಲಿದೆ.

Comments (0)
Add Comment