ಅಸಂಘಟಿತ ಕಾರ್ಮಿಕರ ಅಪಘಾತ ಪರಿಹಾರಕ್ಕಾಗಿ ಅರ್ಜಿ ಆಹ್ವಾನ

 

ದಾವಣಗೆರೆ; ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ಅಸಂಘಟಿತ ಕಾರ್ಮಿಕರು ಇ-ಶ್ರಮ  ಪೆÇೀರ್ಟಲ್ ಮೂಲಕ ನೊಂದಾಯಿತವಾಗಿ ಅಪಘಾತಗೊಂಡ ಫಲಾನುಭವಿಗಳಿಗೆ 2 ಲಕ್ಷ ಅಪಘಾತ  ಪರಿಹಾರಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ.

ಫಲಾನುಭವಿಗಳು  26 ಆಗಸ್ಟ್ 2021 ರಿಂದ 31 ಮಾರ್ಚ್ 2022ರ ಒಳಗಾಗಿ ನೊಂದಾಯಿಸಿ ಅಪಘಾತಗೊಂಡವರಿಗೆ ಪರಿಹಾರ ಪಡೆಯಲು  ಅವಕಾಶ ಕಲ್ಪಿಸಲಾಗಿದೆ.

ಅಪಘಾತದಿಂದ ಮರಣ ಹೊಂದಿದಲ್ಲಿ ಸಲ್ಲಿಸಬೇಕಾದ ದಾಖಲೆಗಳು: ಫಲಾನುಭವಿಯ ಆಧಾರ್ ಸಂಖ್ಯೆ, ಇ-ಶ್ರಮ್ ಕಾರ್ಡ್ ಸಂಖ್ಯೆ, ಮರಣ ಪ್ರಮಾಣ ಪತ್ರ, ಮರಣಕ್ಕೆ ಕಾರಣದ ವೈದ್ಯಕೀಯ ಪ್ರಮಾಣ ಪತ್ರ, ಇಫ್.ಐ.ಆರ್ ಪ್ರತಿ ಹಾಗೂ ಅಪಘಾತದಿಂದ ಅಂಗವೈಕಲ್ಯ ಹೊಂದಿದ್ದಲ್ಲಿ ಸಲ್ಲಿಸಬೇಕಾದ ದಾಖಲೆಗಳು: ಫಲಾನುಭವಿಯ ಆಧಾರ್ ಸಂಖ್ಯೆ, ಇ-ಶ್ರಮ್ ಕಾರ್ಡ್ ಸಂಖ್ಯೆ, ಅಪಘಾತದಿಂದ ಉಂಟಾದ ಅಂಗವೈಕಲ್ಯವನ್ನು ಸೂಚಿಸುವ ಆಸ್ಪತ್ರೆ ದಾಖಲೆಗಳನ್ನು ನಗರದ ಡಿ. ದೇವರಾಜು ಅರಸು ಬಡಾವಣೆಯಲ್ಲಿರುವ ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂ.08192237332ಗೆ ಸಂಪರ್ಕಿಸಬಹುದೆಂದು  ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್ ತಿಳಿಸಿದ್ದಾರೆ.

ಅಸಂಘಟಿತ ಕಾರ್ಮಿಕರ ಅಪಘಾತ ಪರಿಹಾರಕ್ಕಾಗಿ ಅರ್ಜಿ ಆಹ್ವಾನ
Comments (0)
Add Comment