‘ಆರಂಭಿಸಿದ್ದು ನೀವು..ಅಂತ್ಯ ಹಾಡೋದು ನಾವು’ : ಹಮಾಸ್‌ಗೆ ಇಸ್ರೇಲಿ ಪ್ರಧಾನಿ ಖಡಕ್ ಎಚ್ಚರಿಕೆ

ದೇಶವನ್ನು ರಕ್ಷಿಸಲು ಯುದ್ಧ ಅಗತ್ಯ, ನಮ್ಮ ಮೇಲೆ ದಾಳಿ ಮಾಡಿ ಹಮಾಸ್ ದೊಡ್ಡ ತಪ್ಪು ಮಾಡಿದೆ.. ಯುದ್ಧ ಆರಂಭಿಸಿದ್ದು ಅವರು ಅದಕ್ಕೆ ಅಂತ್ಯ ಹಾಡೋದು ನಾವು ಎಂದು ಇಸ್ರೇಲಿ ಪ್ರಧಾನಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.. ಅಲ್ಲದೇ ಈ ದಾಳಿಯನ್ನು ಶತ್ರು ದೇಶಗಳು ದಶಕಗಳವರೆಗೆ ನೆನಪಿಸಿಕೊಳ್ಳಬೇಕು ಎಂದು ಬೆಂಜುಮಿನ್ ನೆತಬ್ಯಾಹು ಎಚ್ಚರಿಸಿದ್ದಾರೆ.. ಅಲ್ಲದೇ ಐಸಿಸ್‌ನಂತಹ ಭಯೋತ್ಪಾದಕ ಸಂಘಟನೆಯಾದ ಹಮಾಸ್ ಅನ್ನು ಜನರು ಒಗ್ಗೂಡಿ ಸೋಲಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಪ್ರತೀಕಾರದ ಭಾಗವಾಗಿ ಇಸ್ರೇಲ್ 3,00,000 ಸೈನಿಕರನ್ನು ಸಜ್ಜುಗೊಳಿಸಿದ್ದು, 1973 ರ ಯೋಮ್ ಕಿಪ್ಪೂರ್ ಯುದ್ಧದ ನಂತರ ಇಸ್ರೇಲ್ ಈ ಮಟ್ಟಕ್ಕೆ ಯುದ್ಧಕ್ಕೆ ಮುನ್ನುಗುತ್ತಿದೆ ಎಂದು ವರದಿಯಾಗಿದೆ.

Comments (0)
Add Comment