ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಪಾವತಿ ಮಿತಿ 5 ಲಕ್ಷಕ್ಕೆ ಏರಿಕೆ: ಆರ್‌ಬಿಐ

ನವದೆಹಲಿ: ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಪಾವತಿಸಲು ಯುಪಿಐ ವಹಿವಾಟಿನ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಈಗಿರುವ 1ಲಕ್ಷ ರೂ.ನಿಂದ 5ಲಕ್ಷ ರೂ.ಗೆ ಏರಿಕೆ ಮಾಡಿದೆ. ಶುಕ್ರವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸುವ ಸಂದರ್ಭದಲ್ಲಿ RBI ಗವರ್ನರ್ ಶಕ್ತಿಕಾಂತ ದಾಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಹೆಚ್ಚಳದಿಂದ ಈಗ ಆಸ್ಪತ್ರೆ ಹಾಗೂ ಶೈಕ್ಷಣಿಕ ವೆಚ್ಚಗಳಿಗೆ ಯುಪಿಐ ಮೂಲಕ ಒಂದು ದಿನಕ್ಕೆ 5ಲಕ್ಷ ರೂ. ತನಕ ಪಾವತಿಸಬಹುದು. ಈ ಹಿಂದೆ ಒಂದು ದಿನಕ್ಕೆ 1ಲಕ್ಷ ರೂ. ತನಕ ಮಾತ್ರ ಯುಪಿಐ ಪಾವತಿಗೆ ಅವಕಾಶವಿತ್ತು. ಗ್ರಾಹಕರಿಗೆ ನೆರವಾಗುವುದು ಇದರ ಉದ್ದೇಶವಾಗಿದೆ. ಶಿಕ್ಷಣ ಮತ್ತು ಆರೋಗ್ಯ ಉದ್ದೇಶಗಳಿಗೆ ಹೆಚ್ಚಿನ ಮೊತ್ತವನ್ನು ಗ್ರಾಹಕರು ಇನ್ನು ಮುಂದೆ ಯುಪಿಐ ಮೂಲಕ ಪಾವತಿ ಮಾಡಲು ಅನುಕೂಲವಾಗಲಿದೆ ಎಂದು ದಾಸ್ ತಿಳಿಸಿದ್ದಾರೆ.

ಈ ಸೌಲಭ್ಯದಿಂದ ಆಸ್ಪತ್ರೆ ಹಾಗೂ ಶೈಕ್ಷಣಿಕ ವೆಚ್ಚಗಳ ದೊಡ್ಡ ಮೊತ್ತವನ್ನು ಯುಪಿಐ ಮೂಲಕವೇ ಪಾವತಿ ಮಾಡಲು ಅವಕಾಶ ಸಿಕ್ಕಂತಾಗಿದೆ.

ವಿವಿಧ ವಲಯಗಳಿಗೆ ಸಂಬಂಧಿಸಿದ ಯುಪಿಐ ವಹಿವಾಟು ಮಿತಿಯನ್ನು ಆಗಾಗ ಪರಿಶೀಲಿಸಿ ಪರಿಷ್ಕರಿಸಲಾಗುತ್ತದೆ. ಅದರಂತೆ ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಪಾವತಿಸುವ ಯುಪಿಐ ವಹಿವಾಟಿನ ಮಿತಿಯನ್ನು ದಿನಕ್ಕೆ 1ಲಕ್ಷ ರೂ.ನಿಂದ 5ಲಕ್ಷ ರೂ.ಗೆ ಹೆಚ್ಚಿಸುವ ಪ್ರಸ್ತಾವನೆಗೆ ಸಭೆ ಅಂಗೀಕಾರ ನೀಡಿದೆ. ಇದು ಗ್ರಾಹಕರಿಗೆ ನೆರವು ನೀಡುವ ನಿರ್ಧಾರವಾಗಿದೆ. ಅಲ್ಲದೆ, ಶಿಕ್ಷಣ ಮತ್ತು ಆರೋಗ್ಯ ಸಂಬಂಧಿ ಕಾರ್ಯಗಳಿಗೆ ಹೆಚ್ಚಿನ ಮೊತ್ತವನ್ನು ಯುಪಿಐ ಮೂಲಕ ಪಾವತಿ ಮಾಡಲು ಗ್ರಾಹಕರಿಗೆ ಇದು ಅನುಕೂಲ ಕಲ್ಪಿಸಲಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

Comments (0)
Add Comment