ಇಂದಿನಿಂದ ( ಮಾ.11) ಸೌದಿ, ಯುಎಇ, ಒಮಾನ್ ಗಳಲ್ಲಿ ರಂಜಾನ್‌ ಉಪವಾಸ ಪ್ರಾರಂಭ

ಸೌದಿ ಅರೇಬಿಯಾದಲ್ಲಿ ಚಂದ್ರ ದರ್ಶನವಾಗಿದ್ದು, ಇಂದಿನಿಂದ ( ಮಾರ್ಚ್ 11) ರಂಜಾನ್‌ ಉಪವಾಸ ಪ್ರಾರಂಭವಾಗಲಿದೆ ಎಂದು ಸೌದಿ ಅರೇಬಿಯಾ ಸರಕಾರದ ಪ್ರಕಟನೆ ತಿಳಿಸಿದೆ.

ರವಿವಾರ ಅಸ್ತಮಿಸಿದ ಸೋಮವಾರ ರಾತ್ರಿ ಇಶಾ ನಮಾಝಿನ ನಂತರ ಸೌದಿ ಅರೇಬಿಯಾದ ಮಸೀದಿಗಳಲ್ಲಿ ತರಾವೀಹ್ ಪ್ರಾರ್ಥನೆಗಳು ಪ್ರಾರಂಭವಾಗಲಿದೆ.

ಇದು ವಿಶ್ವದ 1.8 ಶತಕೋಟಿ ಮುಸ್ಲಿಮರಲ್ಲಿ ರಂಜಾನ್‌ನ ಪವಿತ್ರ ಉಪವಾಸದ ತಿಂಗಳ ಪ್ರಾರಂಭವನ್ನು ಸೂಚಿಸುತ್ತದೆ. ಭಾನುವಾರ ರಾತ್ರಿ ಚಂದ್ರನನ್ನು ನೋಡುವುದು ಎಂದರೆ ಸೋಮವಾರ ಉಪವಾಸದ ಮೊದಲ ದಿನ.

Comments (0)
Add Comment