ಇಂದು ಗುಡ್‌ ಪ್ರೈಡೇ: ಏಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್‌ ಪ್ರೈಡೇ ಎಂದು ಹೇಳುವುದೇಕೆ..?

ಕ್ರೈಸ್ತ ಮತದವರಿಗೆ ಗುಡ್‌ಫ್ರೈಡೇ ದುಃಖದ ದಿನ. ಈ ದಿನದಂದು ಏಸುಕ್ರಿಸ್ತನನ್ನು ಶಿಲುಬೆಗೇರಿಸಿದರು, ಹೀಗಾಗಿ ಈ ದಿನವನ್ನು ಉಪವಾಸ ನಿಯಮ ಆಚರಿಸುವ ಮೂಲಕ ಪಾಲಿಸುತ್ತಾರೆ. ಈಸ್ಟರ್‌ ಭಾನುವಾರದ ಮೊದಲ ಶುಕ್ರವಾರವನ್ನು ಗುಡ್‌ಫ್ರೈಡೇ ಎಂದು ಆಚರಿಸಲಾಗುವುದು. ಈ ವರ್ಷ ಮಾರ್ಚ್ 29ರಂದು (ಇಂದು )ಆಚರಿಸಲಾಗುತ್ತಿದೆ.

ಈ ದಿನ ವಿಶೇಷ ದಿನ
ಈ ಮಾನವ ಕುಲಕ್ಕಾಗಿ ಯೇಸು ಕಿಸ್ತನುಮಾಡಿರುವ ಬಲಿದಾನ ನೆನೆಯಲು ಗುಡ್ ಫ್ರೈಡೇ ಆಚರಿಸಲಾಗುತ್ತದೆ. ಈ ದಿನ ಯೇಸುವಿನ ಹಾಡುಗಳನ್ನು ಹಾಡುತ್ತಾ, ಬೈಬಲ್ ಓದುತ್ತಾ ಆಚರಿಸಲಾಗುತ್ತದೆ . ಕ್ರೈಸ್ತರು ಗುಡ್ ಫ್ರೈಡೆಯನ್ನು ತುಂಬಾ ವಿಶೇಷ ದಿನವೆಂದು ಪರಿಗಣಿಸುತ್ತಾರೆ.

ಯೇಸು ಶಿಲುಬೆಗೇರಿದ ದಿನ ಗುಡ್‌ ಫ್ರೈಡೇ ಎಂದು ಏಕೆ ಕರೆಯಲಾಗುತ್ತದೆ ?
ಯೇಸು ಶಿಲುಬೆಗೇರಿದ ಈ ದಿನವನ್ನು ಒಳ್ಳೆಯ ದಿನವೆಂದು ಕರೆಯಲು ಮುಖ್ಯ ಕಾರಣವೆಂದರೆ ಇಂಗ್ಲಿಷ್ ಶಬ್ದಕೋಶದಲ್ಲಿ ಗುಡ್’ ಎಂದರೆ ಪವಿತ್ರ ಎಂದರ್ಥ. ಈ ದಿನಯೇಸು ಜಗತ್ತಿನ ಒಳಿತಿಗಾಗಿ ಶಿಲುಬೆಗೇರಿದ ದಿನ, ಯೇಸು ಕ್ರಿಸ್ತನು ಸಾವನ್ನಪ್ಪಿದ ದಿನ, ಒಳ್ಳೆಯ ಕಾರಣಕ್ಕೆ ಬಲಿದಾನ ಮಾಡಿದ ದಿನವಾಗಿರುವುದರಿಂದ ಈ ದಿನವನ್ನು ಗುಡ್‌ಫ್ರೈಡೇ ಎಂದು ಕರೆಯಲಾಗುತ್ತದೆ ಎಂದು ಹೇಳಲಾಗಿದೆ.

ಹೇಗೆ ಆಚರಿಸುತ್ತಾರೆ?
ಕ್ರೈಸ್ತರು ಈ ದಿನ ಶೋಕದಲ್ಲಿದ್ದು ಯೇಸುವಿನ ಧ್ಯಾನ ಮಾಡುತ್ತಾರೆ. ಈ ದಿನ ಯಾವುದೇ ಸಮೂಹ ಪ್ರಾರ್ಥನೆ ಈ ದಿನ ನಡೆಯುವುದಿಲ್ಲ. ಈ ಗುಡ್ ಫ್ರೈಡೇಯನ್ನು ಮತ್ತೊಂದು ರೀತಿಯಲ್ಲಿ ಪವಿತ್ರ ಶುಕ್ರವಾರ, ಶ್ರೇಷ್ಠ ಶುಕ್ರವಾರ ಅಥವಾ ಕಪ್ಪು ಶುಕ್ರವಾರವೆಂದು ಎಂದು ಕೂಡ ಕರೆಯಲಾಗುತ್ತದೆ . ಗುಡ್ ಫ್ರೈಡೇಯ ದಿನ ಚರ್ಚ್ ನಲ್ಲಿ ಯಾವುದೇ ರೀತಿಯ ಆಚರಣೆ ನಡೆಯುವುದಿಲ್ಲ. ಈ ಸಮಯದಲ್ಲಿ ಆಚರಿಸಲ್ಪಡುವ ಪವಿತ್ರ ವಿಧಿಗಳೆಂದರೆ ಬ್ಯಾಪಿಸ್ಟಮ್(ಸಾವಿನ ಅಪಾಯದಲ್ಲಿರುವವರು), ಪ್ರಾಯಶ್ಚಿತ್ತ ಮತ್ತು ರೋಗಿಗಳಿಗೆ ಅಭಿಷೇಕ. ಈ ವೇಳೆ ಶಿಲುಬೆಗಳು, ಕ್ಯಾಂಡಲ್ ಗಳು ಮತ್ತು ಬಟ್ಟೆಯನ್ನು ಬಲಿಪೀಠದಿಂದ ತೆಗೆಯಲಾಗುತ್ತದೆ.

ಆಚರಣೆ ಭಿನ್ನವಾಗಿರುತ್ತದೆ
ಎಲ್ಲಾ ಕಡೆ ಒಂದೇ ರೀತಿ ಆಚರಿಸುವುದಿಲ್ಲ. ಸಂಪ್ರದಾಯದಲ್ಲಿ ಭಿನ್ನತೆ ಕ್ರೈಸ್ತ ಧರ್ಮದ ವಿವಿಧ ಪಂಗಡದವರು ಭಿನ್ನ-ಭಿನ್ನವಾಗಿ ಆಚರಿಸುತ್ತಾರೆ. ವಿಶ್ವದ ವಿವಿಧ ಭಾಗಗಳಲ್ಲಿ ಆಚರಣೆ ಕೂಡ ಭಿನ್ನವಾಗಿ ಆಚರಿಸಿದರೂ ನೀಡುವ ಸಂದೇಶ ಮಾತ್ರ ಒಂದೇ. ಏಸು ಕ್ರೈಸ್ತನು ಮಾನವ ಕುಲಕ್ಕಾಗಿ ತನ್ನ ಬಲಿದಾನ ನೀಡಿರುವುದನ್ನು ನೆನಪಿಸಿಕೊಂಡು, ಕ್ರಿಸ್ತ ಹೇಳಿದ ಪ್ರೀತಿಯನ್ನು ಹರಡುವುದು. ಇದಾದ ಬಳಿಕ ಮೂರನೇಯ ದಿನ ಯೇಸು ಕ್ರಿಸ್ತ ಮತ್ತೆ ಬರುತ್ತಾನೆ ಎಂದು ನಂಬಲಾಗಿದೆ ಆ ದಿನವನ್ನು ಈಸ್ಟರ್ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ.

Comments (0)
Add Comment