ಇಂದು ಸಿಎಂ ಜನತಾ ದರ್ಶನ: ನಾಗರೀಕರ ಸಮಸ್ಯೆಗಳ ಪರಿಹಾರಕ್ಕೆ ಸಿದ್ದತೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ 9.30ರಿಂದ ಜನಸ್ಪಂದನ ಕಾರ್ಯಕ್ರಮ ನಡೆಸಲಿದ್ದಾರೆ. ಇದಕ್ಕಾಗಿ ಸಿಎಂ ಸಚಿವಾಲಯವು ಸಕಲ ಸಿದ್ಧತೆ ಮಾಡಿಕೊಂಡಿದೆ.

ಜನತಾ ದರ್ಶನ ಇದು ಜನರ ದರ್ಶನವಾಗಿದೆ. ಜನರ ಸಮಸ್ಯೆಗಳ ದರ್ಶನ. ಸ್ಥಳೀಯ ಸಮಸ್ಯೆಗಳನ್ನ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಹಳೆ ಪರಂಪರೆಯ ಹೊಸ ವಿಧಾನ. ನಾಗರಿಕರ ನೋವು- ನಲಿವಿಗೆ ಸ್ಪಂದಿಸುವ ಮಹತ್ಕಾರ್ಯ. ಸಾರ್ವಜನಿಕರ ಅಹವಾಲು ಸ್ವೀಕರಿಸುವ, ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಕಾಳಜಿ ಈ ಜನತಾ ದರ್ಶನದ ಹಿಂದಿದೆ.

ಸಿಎಂ ಸಿದ್ದರಾಮಯ್ಯರ 2.0 ಸರ್ಕಾರದ ಆಗಮನದ ಬಳಿಕ ಜನತಾ ದರ್ಶನಕ್ಕೆ ಚಾಲನೆ ಸಿಕ್ಕಿದೆ. ಕಳೆದ ಸೆಪ್ಟೆಂಬರ್​​ ನಲ್ಲೇ ಒಂದು ಹಂತದ ಜನತಾ ದರ್ಶನ ಅಂತ್ಯವಾಗಿದ್ದು, ಎರಡನೇ ಅಂತಕ್ಕೆ ಇವತ್ತು ಮುಹೂರ್ತ ಫಿಕ್ಸ್​ ಆಗಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಇಡಿ ದಿನ ಜನರ ಸಮಸ್ಯೆಗಳಿಗೆ ಪರಿಹಾರದ ಮಂತ್ರದಂಡವಾಗಿ ಜನತಾ ದರ್ಶನದಲ್ಲಿ ನಿರತರಾಗ್ತಿದ್ದಾರೆ.

ಈಗಾಗಲೇ ಕೆಲವು ಬಾರಿ ಜನತಾ ದರ್ಶನ ನಡೆಸಿ ಸಾರ್ವಜನಿಕರ ಕುಂದುಕೊರತೆ ಆಲಿಸಿರುವ ಸಿಎಂ ಸಿದ್ದರಾಮಯ್ಯ, ಲೋಕಸಭೆ ಚುನಾವಣೆಗೂ ಮುನ್ನ ಜನರನ್ನು ತಲುಪಲು ಜನತಾ ಮಾರ್ಗ ಆಯ್ದುಕೊಂಡಿದ್ದಾರೆ. ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾದಲ್ಲಿ ಒಂದು ದಿನದ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಜನತಾ ದರ್ಶನದಲ್ಲಿ ಅಹವಾಲು ಸಲ್ಲಿಸಲು ಬರುವ ನಾಗರಿಕರು ತಮ್ಮ ಗುರುತಿನ ಪತ್ರಗಳನ್ನ ತರೋದು ಕಡ್ಡಾಯವಾಗಿದೆ. ಆಧಾರ್‌ ಕಾರ್ಡ್‌ ಅಥವಾ ಪಡಿತರ ಚೀಟಿ ತರಲು ಕೋರಲಾಗಿದೆ ರಾಜ್ಯ ಸರ್ಕಾರ ಟ್ವೀಟ್​​ ಮಾಡಿ ಮಾಹಿತಿ ನೀಡಿದೆ.

ಇದು ಸಿದ್ದರಾಮಯ್ಯ 2ನೇ ಅವಧಿಗೆ ಸಿಎಂ ಆದ ಬಳಿಕ ನಡೆಯುತ್ತಿರುವ ಪೂರ್ಣಾವಧಿ ಜನತಾ ದರ್ಶನ. ಹೀಗಾಗಿ ಸಕಲ ಮುನ್ನೆಚ್ಚರಿಕೆ ವಹಿಸಲಾಗಿದೆ. ಮುಖ್ಯಮಂತ್ರಿ ಸಚಿವಾಲಯವು ಸಕಲ ಸಿದ್ಧತೆಗಳನ್ನು ನಡೆಸಿದೆ.

Comments (0)
Add Comment