ಇತಿಹಾಸ ಸೃಷ್ಟಿಸಿದ ಆರ್​ಸಿಬಿ ಸಿಂಹಿಣಿಯರು – 16 ವರ್ಷದ ಕನಸು ನನಸು

ದೆಹಲಿಯ ಆರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 18.3 ಓವರ್‌ಗಲ್ಲಿ 113 ರನ್‌ ಗಳಿಗೆ ಆಲೌಟ್‌ ಆಯಿತು. 114 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 19.3 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 115 ರನ್‌ ಗಳಿಸಿ ಗೆಲುವು ಸಾಧಿಸಿತು. ಇದೊಂದು ಕ್ಷಣಕ್ಕಾಗಿ ಆರ್​ಸಿಬಿ ಅಭಿಮಾನಿಗಳು ಕಾಯ್ದಿದ್ದು ಬರೋಬ್ಬರಿ 17 ವರ್ಷಗಳು. ಐಪಿಎಲ್ ಶುರುವಾಗಿ ಇಲ್ಲಿಯವರೆಗೆ 16 ಆವೃತ್ತಿಗಳು ಕಳೆದಿವೆ. ಪ್ರತಿ ಆವೃತ್ತಿಯಲ್ಲೂ ಬೆಟ್ಟದಷ್ಟು ನಿರೀಕ್ಷೆ ಇಟ್ಟು ಕಾಯುತ್ತಿದ್ದ ಆರ್​ಸಿಬಿ ಅಭಿಮಾನಿಗಳಿಗೆ ಕೊನೆಗೆ ಎದುರಾಗುತ್ತಿದ್ದಿದ್ದು, ಸೋಲಿನ ನಿರಾಸೆ. ಕಳೆದ 16 ಆವೃತ್ತಿಗಳಲ್ಲಿ ಆರ್​ಸಿಬಿ 4 ಬಾರಿ ಫೈನಲ್​ಗೇರಿತ್ತಾದರೂ ಒಮ್ಮೆಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ.. 16 ಆವೃತ್ತಿಗಳ ಐಪಿಎಲ್​ನಲ್ಲಿ ಆರ್​ಸಿಬಿ ಪುರುಷ ತಂಡ ಮಾಡಲಾಗದ ಕೆಲಸವನ್ನು ಆರ್​ಸಿಬಿ ಮಹಿಳಾ ಹುಲಿಗಳ ಪಡೆ ಕೇವಲ ಎರಡನೇ ಆವೃತ್ತಿಯಲ್ಲೇ ಮಾಡಿ ಮುಗಿಸಿದೆ. ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 18.3 ಓವರ್‌ಗಲ್ಲಿ 113 ರನ್‌ ಗಳಿಗೆ ಆಲೌಟ್‌ ಆಯಿತು. 114 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 19.3 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 115 ರನ್‌ ಗಳಿಸಿ ಗೆಲುವು ಸಾಧಿಸಿತು.

Comments (0)
Add Comment