ಇದು ಫ್ರೀ ಭಾಗ್ಯವಲ್ಲ ದರೋಡೆ ಎಂದು ಬಿಜೆಪಿ ಪೋಸ್ಟರ್‌ ಅಭಿಯಾನ

ಬೆಂಗಳೂರು: ಪಂಚಭಾಗ್ಯಗಳ ಮೂಲಕವೇ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಭ್ರಷ್ಟಾಚಾರದ ಆರೋಪಗಳ ಸುರಿಮಳೆಗೈದು ಪೇಸಿಎಮ್​, 40 ಪರ್ಸೆಂಟ್ ಪೋಸ್ಟರ್​ ಸೇರಿದಂತೆ ಹಲವು ಪೋಸ್ಟರ್​ಗಳನ್ನು ಬಿಜೆಪಿ ಸರ್ಕಾರದ ವಿರುದ್ಧ ಅಂಟಿಸಿ ಚುನಾವಣೆಯಲ್ಲಿ ಲಾಭ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಇದೀಗ ಬಿಜೆಪಿ ಕಾರ್ಯಕರ್ತರು ಪೋಸ್ಟರ್ ವಾರ್ ಆರಂಭಿಸಿದ್ದಾರೆ. ಒಂದೆಡೆ ವಿವಿಧ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ನಡುವೆ ಸಿಎಂ ಹುದ್ದೆ ಬದಲಾವಣೆ ಗೊಂದಲದಿಂದ ಶಾಸಕರೇ ಗುಂಪುಗಳಾಗಿ ಒಡೆದುಹೋಗಿದ್ದಾರೆ. ಇದೀಗ ಈ ಎಲ್ಲ ಗೊಂದಲಗಳ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಕಾಂಗ್ರೆಸ್‌ ಮಾಡಿದ ಅಸ್ತ್ರವನ್ನೇ ತಿರುಗುಬಾಣವಾಗಿ ಪ್ರಯೋಗಿಸಲು ಮುಂದಾಗಿದೆ.

ಅದರ ಮುಂದುವರಿದ ಭಾಗವಾಗಿ ಪೋಸ್ಟರ್‌ ಅಭಿಯಾನ ಆರಂಭಿಸಿದ್ದು, ಗ್ಯಾರಂಟಿ ಯೋಜನೆಗಳಾಸಲಿಯತ್ತು ಎಂಬ ಹೆಸರಿನಲ್ಲಿ ಪೋಸ್ಟರ್‌ ಗಳನ್ನು ಅಂಟಿಸಿ ಅಭಿಯಾನ ಶುರುಮಾಡಿದೆ. ಫ್ರೀ ಟಿಕೆಟ್‌ ಅಂತ ನಂಬಿಸಿ ಮೂರು ಬಾರಿ ಬಸ್‌ ದರ ಏರಿಸಲಾಗಿದೆ. ಮೈಸೂರಿನಿಂದ ಬೆಂಗಳೂರಿಗೆ 160 ರೂ. ಇದ್ದ ಬಸ್‌ ದರ ಈಗ 200 ಆಗಿದೆ. ಒಂದು ಕಡೆ ಸುಲಿಗೆ ಇನ್ನೊಂದು ಕಡೆ ಉಚಿತ. ಇದು ಫ್ರೀ ಭಾಗ್ಯವಲ್ಲ ದರೋಡೆ ಎಂದು ಪೋಸ್ಟರ್‌ ಅಭಿಯಾನ ಆರಂಭಿಸಿದೆ.

Comments (0)
Add Comment